ನ್ಯೂಝಿಲೆಂಡ್‌ ಉಗ್ರರ ದಾಳಿಗೆ ಗುರಿಯಾದವರ ಸಂಬಂಧಿಕರಿಗೆ ಹಜ್ ನಿರ್ವಹಣೆ ಭಾಗ್ಯ

ರಿಯಾದ್: ನ್ಯೂಝಿಲೆಂಡ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಗುರಿಯಾದವರ ಸಂಬಂಧಿಕರಿಗೆ ಈ ವರ್ಷ ಹಜ್ ನಿರ್ವಹಿಸಲು ಸೌಕರ್ಯ ಒದಗಿಸಲು ಸೌದಿ ಅರೇಬಿಯಾ ಮುಂದಾಗಿದೆ.

ಸೌದಿ ರಾಜ ಸಲ್ಮಾನರ ಅತಿಥಿಗಳಾಗಿ ಅವರು ಹಜ್ ನಿರ್ವಹಿಸಲಿದ್ದಾರೆ. ದಾಳಿಯಲ್ಲಿ ಬಲಿಯಾದ, ಗಾಯಗೊಂಡವರ ಕುಟುಂಬದ 200 ಮಂದಿಗೆ ಹಜ್ ನಿರ್ವಹಿಸಲು ಅನುವು ಮಾಡಿಕೊಡಲಾಗಿದೆ.

ಕಳೆದ ಮಾರ್ಚ್‌ನಲ್ಲಿ ನ್ಯೂಝಿಲೆಂಡ್ ನ ಎರಡು ಮಸೀದಿಗಳಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 51 ಮಂದಿ ಬಲಿಯಾಗಿ, 49 ಮಂದಿ ಗಾಯಗೊಂಡಿದ್ದರು. ಶುಕ್ರವಾರ ಜುಮಾ ವೇಳೆ ದಾಳಿ ನಡೆದಿದ್ದವು.

ಇಸ್ಲಾಮಿಕ್ ಖಾತೆಯ ಸಚಿವ ಶೈಖ್ ಡಾ.ಅಬ್ದುಲ್ಲತೀಫ್ ಬಿನ್ ಅಬ್ದುಲ್ ಅಝೀಝ್ ಆಲು ಶೈಖ್ ವಾರ್ತಾ ಸಮ್ಮೇಳನದಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಭಯೋತ್ಪಾದನೆ ವಿರುದ್ದ ಸೌದಿ ತಾಳಿರುವ ನಿಲುವು ಕೂಡ ರಾಜ ಕಲ್ಪನೆಗೆ ಹೇತುವಾಗಿದೆ ಎಂದವರು ನುಡಿದಿದ್ದಾರೆ. ನ್ಯೂಝಿಲೆಂಡ್ ಎಂಬಸಿ ಯೊಂದಿಗೆ ಚರ್ಚಿಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಹಜ್ಜಾಜ್‌ಗಳಿಗೆ ಸಕಲ ಸೌಕರ್ಯಗಳನ್ನೂ ಕಲ್ಪಿಸಲಾಗುವುದುದು ಎಂದು ಸಚಿವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!