ದುಬೈ: ಸಾರಿಗೆ ದಂಡದ ಮಾಹಿತಿ ತಿಳಿಯಲು ವಾಟ್ಸ್ ಆ್ಯಪ್‌ನಲ್ಲೂ ಸೌಕರ್ಯ

ದುಬೈ: ಸಾರಿಗೆ ದಂಡದ ಮಾಹಿತಿ ತಿಳಿಯಲು ಇನ್ನು ಮುಂದೆ ವಾಟ್ಸ್ ಆ್ಯಪ್‌ನಲ್ಲೂ ಸೌಕರ್ಯ ಒದಗಿಸಲಾಗುತ್ತಿದೆ. ದುಬೈ ರಸ್ತೆ ಮತ್ತು ಸಾರಿಗೆ ಅಥಾರಿಟಿಯು ಈ ಬಗ್ಗೆ ತೀರ್ಮಾನ ಕೈಗೊಂಡಿದೆ.

ದಿನಪೂರ್ತಿ ಈ ಸೇವೆ ಲಭ್ಯವಾಗಲಿದ್ದು, ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಆರ್ಟಿಎ ಈ ಬಗ್ಗೆ ಮಾಹಿತಿ ನೀಡಿದೆ. ಯಾವ ಸಮಯದಲ್ಲೂ ಟ್ರಾಫಿಕ್ ದಂಡಗಳ ಮಾಹಿತಿಯನ್ನು ಕೇಳಿ ತಿಳಿಯಬಹುದಾಗಿದ್ದು, ಆರ್ಟಿಒದ 058-8009090 ಎನ್ನುವ ಸಂಖ್ಯೆ ಮೂಲಕ ಸಂಪರ್ಕಿಸಬಹುದಾಗಿದೆ.

ದಂಡಗಳು ಎಲ್ಲಿ‌ ಮತ್ತು ಹೇಗೆ ಎಂಬುದರ ಕುರಿತು ಮಾಹಿತಿ ಕೂಡ ಲಭ್ಯವಾಗಲಿದ್ದು, ಉತ್ತರ ತಕ್ಷಣ ಲಭಿಸಲಿದೆ.

ಗ್ರಾಹಕರಿಗೆ ಎಲ್ಲವನ್ನೂ ಸುಲಭಗೊಳಿಸುವ ಭಾಗವಾಗಿ ಈ ಕ್ರಮ ಎಂದು ಆರ್‌ಟಿಎ ವ್ಯಕ್ತಪಡಿಸಿದೆ. ಪ್ರಸಕ್ತ ಆನ್ ಲೈನ್ ಸೇವೆ ಮೂಲಕ ಹೆಚ್ಚಿನವರು ಈ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಸಾಮಾಜಿಕ ಮಾಧ್ಯಮ ಮೂಲಕ ಸೇವೆಯನ್ನು ವಿಸ್ತರಿಸಲು ವಿವಿಧ ಕ್ರಮಗಳನ್ನು ಕೈಗೊಳ್ಳಲು ದುಬೈ ಮುಂದಾಗಿದೆ.

Leave a Reply

Your email address will not be published. Required fields are marked *

error: Content is protected !!