ಇನ್ಮುಂದೆ ಉಮ್ರಾ ವಿಸಾದಲ್ಲಿ ಸೌದಿಯ ಎಲ್ಲಾ ನಗರಗಳಿಗೆ ಭೇಟಿ ನೀಡಬಹುದು

ರಿಯಾದ್.ಜು,17: ಉಮ್ರಾ ಹಾಗೂ ಸಂದರ್ಶನ ವೀಸಾದಲ್ಲಿ ಸೌದಿ ಅರೇಬಿಯಾಕೆ ಆಗಮಿಸುವವರಿಗೆ ದೇಶದ ಎಲ್ಲ ನಗರಗಳಿಗೆ ಭೇಟಿ ನೀಡುವುದಕ್ಕೆ ಅನುಮತಿ.

ಇಂದು ಸೌದಿ ದೊರೆ ಸಲ್ಮಾನ್ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನವನ್ನು ಕೈಗೊಳ್ಳಲಾಗಿದೆ.

ಉಮ್ರಾ, ಸಂದರ್ಶನ ವೀಸಾದಲ್ಲಿ ಸೌದಿಗೆ ಆಗಮಿಸುವವರು ದೇಶದ ಎಲ್ಲಾ ನಗರಗಳಲ್ಲಿಯೂ ಸಂಚರಿಸಬಹುದು. 36 ವರ್ಷಗಳ ಹಿಂದೆ ರೂಪಿಸಲಾದ ಕಾನೂನು ಈ ಹೊಸ ತೀರ್ಮಾನದೊಂದಿಗೆ ದುರ್ಬಲಗೊಳ್ಳುತ್ತಿದೆ.

ಉಮ್ರಾ ವೀಸಾದಲ್ಲಿ ಸೌದಿಗೆ ಬರುವವರು, ಮಕ್ಕ, ಮದೀನಾ, ಜಿದ್ದಾ ನಗರಗಳ ಹೊರಗೆ ಹೋಗುವುದನ್ನು 1987ರಲ್ಲಿ ತಡೆಹಿಡಿಯಲಾಗಿದ್ದು, ಈಗ ಸೌದಿ ಅರೇಬಿಯಾದ ಎಲ್ಲಾ ನಗರಗಳಿಗೆ ಸಂದರ್ಶನ ನಡೆಸಲು ಅವಕಾಶ ಒದಗಿಸಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!