ಸೌದಿ: ವ್ಯಾಪಾರ ಕೇಂದ್ರಗಳು ದಿನದ 24 ಗಂಟೆಗಳು ತೆರೆದಿಡಲು ಅನುಮತಿ

ಜಿದ್ದ, ಜು. 17: ವ್ಯಾಪಾರ ಕೇಂದ್ರಗಳನ್ನು ದಿನದ 24 ಗಂಟೆಗಳ ಕಾಲ ತೆರೆದಿಡಲು ಸರಕಾರ ಅನುಮತಿ ನೀಡಲು ನಿರ್ಧರಿಸಿದ್ದು, ದೊರೆ ಸಲ್ಮಾನ್‍ರ ಅಧ್ಯಕ್ಷತೆಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಸದ್ಯಕ್ಕೆ ಹನ್ನೆರಡು ಗಂಟೆಗಳ ಕಾಲ ಮಾತ್ರ ಅಂಗಡಿಗಳು ತೆರೆದಿಡಲು ಅನುಮತಿ ಇದೆ. ಇನ್ನು ಮುಂದೆ ಸಾರ್ವಜನಿಕರ ಹಿತದೃಷ್ಟಿಯಿಂದ 24 ಗಂಟೆಗಳ ಅನುಮತಿ ನೀಡಬೇಕಾದ ವಿಭಾಗದ ಸಂಸ್ಥೆಗಳನ್ನು ಆಯ್ಕೆ ಮಾಡುವಂತೆ ಮುನ್ಸಿಪಲ್ ಗ್ರಾಮ ಸಚಿವಾಲಯವನ್ನು ಸಚಿವ ಸಂಪುಟ ಆಗ್ರಹಿಸಿದೆ. ಇದಕ್ಕಾಗಿ ಮುನ್ಸಿಪಲ್ ಸಚಿವಾಲಯದಲ್ಲಿ ಪ್ರತ್ಯೇಕ ಶುಲ್ಕವನ್ನು ಪಾವತಿಸಿ ಅನುಮತಿ ಪಡೆಯಬಹುದಾಗಿದೆ.

ವಿಶ್ರಮ ರಹಿತ 24 ಗಂಟೆಗಳು ಅಂಗಡಿಗಳು ಕಾರ್ಯನಿರ್ವಹಿಸುವ ತೀರ್ಮಾನ ವ್ಯಾಪಾರೀ ಕ್ಷೇತ್ರದಲ್ಲಿ ದೊಡ್ಡ ಜಾಗೃತಿ ತರಬಹುದು ಎಂದು ಸಚಿವ ಸಂಪುಟದ ನಿರೀಕ್ಷೆಯಾಗಿದೆ. ಈ ವರೆಗೆ ರಾತ್ರಿ ಹನ್ನೆರಡು ಗಂಟೆಗೆ ಅಂಗಡಿಗಳನ್ನು ಮುಚ್ಚಬೇಕಾಗಿತ್ತು. ರಮಝಾನ್‍ನಲ್ಲಿ ಮಾತ್ರ ಇದಕ್ಕೆ ವಿನಾಯತಿ ನೀಡಲಾಗಿತ್ತು. ನಿಯಮಾಧಾರಿತ ಕೆಲವು ಅಂಗಡಿಗಳಿಗೆ ವಿನಾಯಿತಿ ಇರುತ್ತಿತ್ತು.

ಇದನ್ನು ಎಲ್ಲ ಅಂಗಡಿಗಳಿಗೂ ವಿಸ್ತರಿಸಲು ಯೋಜನೆ ರೂಪಿಸಲಾಗುತ್ತಿದೆ. ನಮಾಝ್ ಸಮಯದಲ್ಲಿ ಅಂಗಡಿ ಮುಚ್ಚಬೇಕೆನ್ನುವ ಹಿಂದಿನ ಕಾನೂನು ಮುಂದುವರಿಯಲಿದೆಯೇ ಎನ್ನುವುದು ಈಗ ಸ್ಪಷ್ಟವಾಗಿಲ್ಲ.ನಮಾಜ್ ನಿರ್ವಹಣೆಗಾಗಿ ಕೆಲವು ಮಳಿಗೆಗಳಲ್ಲಿ ಪ್ರತ್ಯೇಕ ಕೊಠಡಿಗಳನ್ನು ಸಜ್ಜುಗೊಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!