janadhvani

Kannada Online News Paper

ಉಮ್ರಾ ಗ್ರೂಪ್ ನಿಂದ ವಂಚನೆ- ಸಂಕಷ್ಟದಲ್ಲಿದ್ದ ಉಮ್ರಾ ತಂಡಕ್ಕೆ ಆಸರೆಯಾದ ಕೆಸಿಎಫ್

ಮದೀನಾ ಮುನವ್ವರ,ಜುಲೈ.10: ಬೆಂಗಳೂರಿನ ಬೈತುಲ್ ಹರಮ್ ಇಂಟರ್ನ್ಯಾಷನಲ್ ಉಮ್ರಾ ಗ್ರೂಪ್ ಮೂಲಕ ಉಮ್ರಾ ಯಾತ್ರಾರ್ಥಿಗಳಾಗಿ ಬಂದು ಊರಿಗೆ ಹಿಂದಿರುಗುವ ವ್ಯವಸ್ಥೆ ಕಲ್ಪಿಸದೆ ಟ್ರಾವೆಲ್ಸ್’ನಿಂದ ವಂಚನೆಗೊಳಪಟ್ಟು ರೂಮ್ ಹಾಗೂ ಊಟದ ವ್ಯವಸ್ಥೆ ಇಲ್ಲದೆ ಮಹಿಳೆಯರು, ವಯಸ್ಕರು ಮಕ್ಕಳನ್ನೊಳಗೊಂಡ 81 ಮಂದಿ ಉಮ್ರಾ ತಂಡ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

ವೈರಲ್ ವಿಡಿಯೋ ಮ‌ೂಲಕ KCF ಮದೀನಾ ಮುನವ್ವರ ಸೆಕ್ಟರ್ ಸಾಂತ್ವನ ಇಲಾಖೆಯ ಗಮನಕ್ಕೆ ಬಂದಾಗ ಯಾತ್ರಾರ್ಥಿಗಳನ್ನು ಭೇಟಿಯಾಗಿ ಸಾಂತ್ವನ ಪಡಿಸಿ ಬೇಕಾಗುವ ವ್ಯವಸ್ಥೆಮಾಡಿಕೊಡಲಾಗಿದೆ.

ಭಾರತೀಯ ದೂತಾವಾಸ ಕಛೇರಿಯ ಸಹಕಾರದಿಂದ ಮೂರು ಹಂತವಾಗಿ 81 ಮಂದಿ‌ಯನ್ನು ಜಿದ್ದಾ ವಿಮಾನ ನಿಲ್ದಾಣ ಮೂಲಕ ಸ್ವದೇಶ ತಲುಪಿಸುವ ವ್ಯವಸ್ಥೆ ಕಲ್ಪಿಸಲಾಗಿದ್ದು.ಜುಲೈ 9ರಂದು ಹೊರಟ 25 ಮಂದಿಯ ಮೊದಲ ತಂಡ ಸ್ವದೇಶ ತಲುಪಿದ್ದು,ಇಂದು ಹೊರಟ 25ಮಂದಿ ಸ್ವದೇಶ ಪ್ರಯಾಣದಲ್ಲಿದೆ. ಉಳಿದ ಎಲ್ಲಾ ಯಾತ್ರಾರ್ಥಿಗಳಿಗೆ ನಾಳೆ ಗುರುವಾರ ಪ್ರಯಾಣದ ವ್ಯವಸ್ಥೆ ಮಾಡಲಾಗಿದೆ.

ಕೆ.ಸಿ.ಎಫ್ ಸಾಂತ್ವನ ಇಲಾಖೆಯ ಸದಸ್ಯರು ಸಂಕಷ್ಟದಲ್ಲಿರುವ ಯಾತ್ರಾರ್ಥಿಗಳ ವಸತಿ ಕೇಂದ್ರಕ್ಕೆ ಎಲ್ಲಾ ದಿವಸ ಭೇಟಿನೀಡಿ ಬೇಕಾದ ಸಹಾಯ ಹಾಗೂ ಸ್ವದೇಶಕ್ಕೆ ಮರಳುವವರೆಗೆ 3ದಿವಸಗಳ ಊಟದ ವ್ಯವಸ್ಥೆ ಕಲ್ಪಿಸಿ ಸಂಕಷ್ಟದಲ್ಲಿರುವ ಉಮ್ರಾ ತಂಡಕ್ಕೆ‌ ಆಸರೆಯಾಗಿದ್ದಾರೆ.

error: Content is protected !! Not allowed copy content from janadhvani.com