janadhvani

Kannada Online News Paper

ಕುವೈತ್: ಯಾತ್ರಿಕರ ವಿವರ ಪರಿಶೀಲನೆಗಾಗಿ ‘ಬಯೋ ಮೆಟ್ರಿಕ್’ ವ್ಯವಸ್ಥೆ

ಕುವೈತ್ ಸಿಟಿ: ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯಾತ್ರಿಕರ ವಿವರ ಪರಿಶೀಲನೆಗಾಗಿ ಬಯೋ ಮೆಟ್ರಿಕ್ ವ್ಯವಸ್ಥೆಯನ್ನು ಸಜ್ಜುಗೊಳಿಸಲಾಗುತ್ತಿದೆ. ‘ಫೇಷಿಯಲ್ ಮೆಕಗ್ನೀಷಿನ್’ ಅತ್ಯಾಧುನಿಕ ತಂತ್ರಜ್ಞಾನ ಮೂಲಕ ವ್ಯಕ್ತಿಗಳ ವೈಯಕ್ತಿಕ ಮಾಹಿತಿಯನ್ನೂ ಪಡೆಯುವ ವಿಧಾನವಾಗಿದೆ ಇದು.ಕುವೈತ್ ಏರ್ ವೇಸ್‌ನ ವಿಮಾನಗಳಿಗೆ ಮಾತ್ರವಿರುವ ಟರ್ಮಿನಲ್‌ನಲ್ಲಿ ಮುಂದಿನ ಮೂರು ತಿಂಗಳ ಅವಧಿಗೆ ಪ್ರಯೋಗಾರ್ಥ ಸ್ಥಾಪಿಸಲಾಗುತ್ತಿದೆ.

ನಾಲ್ಕನೇ ಟರ್ಮಿನಲ್ ಪೂರ್ಣ ಗೊಂಡು ಒಂದು ವರ್ಷ ಪೂರ್ಣಗೊಳ್ಳುವ ವೇಳೆ ಹೊರಡಿಸಲಾದ ಪ್ರಸ್ತಾಪದಲ್ಲಿ ವಾಯುಯಾನ ಖಾತೆಯ ಅಧಿಕಾರಿ ಯೂಸುಫ್ ಅಲ್ ಫೌಝಾನ್ ಈ ಕುರಿತು ಮಾಹಿತಿ ನೀಡಿದ್ದಾರೆ. ಗ್ರಾಹಕರಿಗೆ ನೀಡಲಾಗುವ ಸೇವೆಗಳನ್ನು ಉತ್ತಮಗೊಳಿಸುವ ಸಲುವಾಗಿ ಜಾರಿಗೆ ತರಲಾಗುವ ಬಹುಮುಖ ಯೋಜನೆಯ ಭಾಗವಾಗಿ ಬಯೋಮೆಟ್ರಿಕ್ ಸ್ಕ್ರೀನಿಂಗ್ ಸ್ಥಾಪಿಸಲಾಗುತ್ತಿದೆ.

ಪ್ರಾಯೋಗಿಕವಾಗಿ ಸ್ಥಾಪಿಸಲಾಗುವ ಯೋಜನೆ ವಿಜಯಗೊಂಡರೆ ಅದನ್ನು ಸ್ಥಿರಗೊಳಿಸಲಾಗುವುದು.

ಬ್ಯಾಗೇಜ್‌ಗಳ ತೂಕಗಳ ಪರಿಶೋಧನೆ, ಪ್ರವೇಶ ಧ್ವಾರದಲ್ಲಿ ಬರಮಾಡಿಕೊಳ್ಳುವಿಕೆ, ಬ್ಯಾಗೇಜ್ಗಳ ಸ್ವೀಕಾರ ಇತ್ಯಾದಿ ಕ್ರಮಗಳನ್ನು ಸುಗಮಗೊಳಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಕುವೈತ್‌ಗೆ ಬಂದಿಳಿಯುವ ಯಾತ್ರಿಕರಿಗೆ ದೇಶದ ಕುರಿತು ಹೆಮ್ಮೆ ಮತ್ತು ವಿಮಾನ ನಿಲ್ದಾಣದ ಬಗ್ಗೆ ತೃಪ್ತಿಯನ್ನು ಇನ್ನಷ್ಟು ಇಮ್ಮಡಿಗೊಳಿಸುವ ಬದಲಾವಣೆಗಳನ್ನು ಜಾರಿಗೆ ತರುವುದು ವಾಯುಯಾನ ಖಾತೆಯ ತೀರ್ಮಾನವಾಗಿದೆ. ಇದಕ್ಕಾಗಿ ಇತರ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಗಳ ಮಾದರಿಯನ್ನು ಹಿಂಬಾಲಿಸಲಾಗುವುದು ಎಂದು ಸಿವಿಲ್ ಏವಿಯೇಷನ್ ಡೈರೆಕ್ಟರ್ ತಿಳಿಸಿದ್ದಾರೆ.

error: Content is protected !! Not allowed copy content from janadhvani.com