janadhvani

Kannada Online News Paper

ಮಕ್ಕಾ: ಪ್ರಸಕ್ತ ವರ್ಷದಲ್ಲಿ ಹಜ್ಜಾಜ್‌ಗಳ ಬಲಿ ನಿರ್ವಹಣಾ ಕೂಪನ್‌ನ ಮೊತ್ತವನ್ನು 496 ರಿಯಾಲ್ ಆಗಿ ನಿಗದಿ ಪಡಿಸಲಾಗಿದೆ. ಇಸ್ಲಾಮಿಕ್ ಡೆವಲಪ್ಮೆಂಟ್ ಬ್ಯಾಂಕ್ ಯೊಜನೆಯನ್ನು ನಿಭಾಯಿಸಲಿದೆ. ವಿಶ್ವದ ಯಾವುದೇ ಭಾಗದ ವಿಶ್ವಾಸಿಗಳಿಗೆ ಬೇಕಾದರೂ ಕೂಪನ್ ಪಡೆದು ಬಲಿ ನಿವಹಿಸಲು ಸಾಧ್ಯವಾಗಲಿದೆ.

ಈ ಬಾರಿ ಬಲಿ ಕ್ಲಬ್‌ಗಳನ್ನು ಆನ್ ಲೈನ್ ಮೂಲಕ ಕ್ರಮೀಕರಿಸಲಾಗಿದ್ದು, 496 ಒಂದು ಆಡಿಗೆ ಇರುವ ಕಡಿಮೆ ಮೊತ್ತವಾಗಿದೆ. ಅಲ್ ರಾಜಿಹಿ ಬ್ಯಾಂಕ್, ಸೌದಿ ಪೋಸ್ಟ್ ಮುಂತಾದ ಸಂಸ್ಥೆಗಳ ಮೂಲಕವೂ ಕೂಪನ್ ಲಭ್ಯವಾಗಲಿದೆ. ಅದೇ ರೀತಿ ಮಸ್ಜಿದುಲ್ ಹರಂ, ಜಂರತ್ ಮುಂತಾದೆಡೆ ಕೌಂಟರ್ ತೆರೆಯಲಾಗಿದೆ.

ಹಜ್ ಸಚಿವಾಲಯದ (www.adahi.org) ವೆಬ್ ಸೈಟ್ ಮೂಲಕವೂ ಕೂಪನ್ ಪಡೆಯಬಹುದಾಗಿದೆ. ಬಲಿಗಾಗಿ ಹಣ ಸ್ವೀಕರಿಸಲಾದ ಬಗ್ಗೆಯೂ, ಬಲಿ ನಿರ್ವಹಿಸಲಾದ ಬಗ್ಗೆಯೂ ಎಸ್‌ಎಂಎಸ್ ಮೂಲಕ ಪಾವತಿದಾರರಿಗೆ ಮಾಹಿತಿ ಲಭಿಸಲಿದೆ.

ಭಾರತೀಯ ಹಜ್ಜಾಜ್‌ಗಳು ಬಲಿಗಾಗಿ 9150 ರೂ. ಪಾವತಿಸಬೇಕಾಗುತ್ತದೆ. ಮುಂಗಡ ನೋಂದಣಿ ಮಾಡಿದವರಿಗೆ ಮಾತ್ರ ಅವಕಾಶ ಲಭಿಸಲಿದೆ. ಬಲಿ ಮೃಗಗಳ ಆರೋಗ್ಯ ತಪಾಸಣೆಗಾಗಿ ಅತ್ಯಾಧುನಿಕ ಸೌಲಭ್ಯವನ್ನೂ ಸಜ್ಜುಗೊಳಿಸಲಾಗಿದೆ.

error: Content is protected !! Not allowed copy content from janadhvani.com