janadhvani

Kannada Online News Paper

ರೆಡ್ ಕ್ರಾಸ್ ಸಂಸ್ಥೆಯಿಂದ ಜಿಲ್ಲಾ ವ್ಯಾಪ್ತಿಯ ಸ್ವಯಂಸೇವಕರಿಗೆ ಬೇಡ್ಜ್ ವಿತರಣೆ

ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಳಯ ಹಾಗೂ ಇನ್ನಿತರ ತುರ್ತು ಸಂದರ್ಭದಲ್ಲಿ ಕಾರ್ಯಾಚರಣೆ ನಡೆಸಲು ಜಿಲ್ಲೆಯಾದ್ಯಂತ ವಿವಿಧ ತಾಲೂಕುಗಳಿಂದ ಆಯ್ಕೆಯಾದ ಅಧಿಕೃತವಾಗಿರುವ ಸ್ವಯಂಸೇವಕರಿಗೆ ಅಧಿಕೃತ ಬಾಡ್ಜ್ ವಿತರಿಸಲಾಯಿತು.

ರೆಡ್ ಕ್ರಾಸ್ ಸಂಸ್ಥೆಯ ಮುಖ್ಯಸ್ಥರಾದ ಎಸ್.ಎ.ಪ್ರಭಾಕರ ಶರ್ಮ, ಪ್ರವೀಣ್ ಹಾಗೂ ಎಸ್ಸೆಸ್ಸೆಫ್ ದ.ಕ ಬ್ಲಡ್ ಸೈಬೋ ಸಂಚಾಲಕರಾದ ಕರೀಂ ಕದ್ಕಾರ್, ಎಸ್ಸೆಸ್ಸೆಫ್ ದ.ಕ ಜಿಲ್ಲಾ ಸಮಿತಿ ಸದಸ್ಯರಾದ ಎ.ಎಂ.ಫೈಝಲ್ ಝುಹ್’ರಿ, ಜಿ.ಕೆ.ಇಬ್ರಾಹಿಂ ಅಂಜದಿ, ಸುಹೈಲ್ ಮಂಗಳೂರು, ಸುಳ್ಯ ಡಿವಿಷನ್ ಬ್ಲೆಡ್ ಸೈಬೋ ಉಸ್ತುವಾರಿ ಸಿದ್ದೀಖ್ ಗೂನಡ್ಕ ಹಾಗೂ ಇನ್ನಿತರ ಸಂಘಟನೆಗಳ ನೇತಾರರೂ ಕಾರ್ಯಕರ್ತರೂ ಭಾಗವಹಿಸಿದರು.

ಸ್ವಯಂಸೇವಕರಿಗೆ ಬೇಕಾದ ಮಾಹಿತಿಯನ್ನು ಹಾಗೂ ಸಂಸ್ಥೆಯು ನೀಡುತ್ತಿರುವ ಬ್ಯಾಡ್ಜ್ ನ ಉಪಯೋಗದ ಕುರಿತು ಸಂಸ್ಥೆಯ ಮುಖ್ಯಸ್ಥರು ವಿವರಿಸಿದರು. ತುರ್ತು ಸಂದರ್ಭದಲ್ಲಿ ಸ್ವಯಂ ಶರೀರವನ್ನು ರಕ್ಷಿಸುವುದರೊಂದಿಗೆ ಇತರರಿಗೆ ಬೇಕಾದ ಸೇವೆ ಮಾಡುವಂತೆಯೂ ಅಧಿಕಾರಿಗಳೊಂದಿಗೆ ತುರ್ತು ಕಾರ್ಯಾಚರಣೆಯಲ್ಲಿ ಪೂರ್ಣವಾಗಿಯೂ ಸಹಕರಿಸುವಂತೆಯೂ ಅವರು ನಿರ್ದೇಶಿಸಿದರು.

ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ನಿಂದ ರಿಯಾಝ್ ನೆಕ್ಕಿಲ, ನೌಷಾದ್ ಕೆರೆಮೂಲೆ, ಅಬ್ದುರ್ರಹ್ಮಾನ್ ಮೊಗರ್ಪಣೆ, ಅಬ್ದುಲ್ ಮಾಲಿಕ್ ಕುಂಬಕ್ಕೋಡು, ಬಿ.ಎಂ.ರಫೀಕ್ ನಾವೂರು, ಅಶ್ರಫ್ ಕೊಯನಾಡು, ಹಸೈನಾರ್ ಗುತ್ತಿಗಾರು, ಅಶ್ರಫ್ ಗೂನಡ್ಕ, ಸಿದ್ದೀಖ್ ಕಟ್ಟೆಕ್ಕಾರ್, ಬಿ.ಎ.ಸಿದ್ದೀಖ್ ಗಾಂಧಿನಗರ, ಮುಸ್ತಫ ಸಮಾಧಿ, ಬಾತಿಷ ಸಮಾಧಿ, ಶಿಹಾಬುದ್ದೀನ್ ನೆಕ್ಕಿಲ ಮೊದಲಾದವರು ರೆಡ್ ಕ್ರಾಸ್ ಸಂಸ್ಥೆಯ ಸ್ವಯಂಸೇವಾ ಬ್ಯಾಡ್ಜ್ ನ್ನು ಸ್ವೀಕರಿಸಿದರು.

error: Content is protected !! Not allowed copy content from janadhvani.com