janadhvani

Kannada Online News Paper

ಜಿಸಿಸಿ ಸುನ್ನೀ ಫ್ರೆಂಡ್ಸ್ ಬನ್ನೂರು ವತಿಯಿಂದ ಆರ್ಥಿಕ ನೆರವು

ಪುತ್ತೂರು: ಬನ್ನೂರಿನ ಬದ್ರಿಯಾ ಜುಮಾ ಮಸೀದಿಯ ಜಮಾಅತ್ತಿಗೆ ಒಳಪಟ್ಟ ಬಡ ಕುಟುಂಬದ ಮದುವೆಗೆ ಸುನ್ನೀ ಫ್ರೆಂಡ್ಸ್ ಬನ್ನೂರು ಜಿಸಿಸಿ ರಿಲೀಫ್ ಫಂಡ್ ಇದರ ವತಿಯಿಂದ 25 ಸಾವಿರ ರೂಪಾಯಿ ಧನ ಸಹಾಯ ನೀಡಲಾಯಿತು.

ಬನ್ನೂರಿನ ಸುನ್ನಿ ಸೆಂಟರಿನಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಾತನಾಡಿದ ಅಬ್ದುರ್ರಹ್ಮಾನ್ ಮದನಿ ಉಸ್ತಾದ್ ಬನ್ನೂರು ಅವರು,ಸಹಾಯ ನಿರೀಕ್ಷೆಯಲ್ಲಿರುವವರಿಗೆ ಸಹಾಯಹಸ್ತ ಚಾಚಿದರೆ ದ್ವಿಲೋಕದಲ್ಲೂ ಅದೊಂದು ಉತ್ತಮ ಪ್ರತಿಫಲಯುಕ್ತ ಸತ್ಕರ್ಮವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು. ಧನಸಹಾಯ ನೀಡಿ ಬಡಕುಟುಂಬದ ಕಣ್ಣೀರೊರೆಸಲು ಸಹಕರಿಸಿದ ಸಂಘಟನೆಯ ದಾನಿಗಳಿಗೆ ಅವರು ಪ್ರತ್ಯೇಕ ದುಆಃ ಮಾಡಿದರು.

ಈ ಸಂದರ್ಭದಲ್ಲಿ ಸುನ್ನೀ ಸೆಂಟರ್ ಅಧ್ಯಕ್ಷರಾದ ಫಾರೂಕ್ ಬನ್ನೂರು, ಎಸ್ ವೈ ಎಸ್ ಅಧ್ಯಕ್ಷರಾದ ಇಸ್ಮಾಯಿಲ್ ಹಾಜಿ ಅಕ್ಕರೆ, ಸುನ್ನೀ ಸೆಂಟರ್ ಪ್ರಧಾನ ಕಾರ್ಯದರ್ಶಿ ಹಮೀದ್ ಲಕ್ಕಿ ಸ್ಟಾರ್ ಬನ್ನೂರು, ಅಬ್ದುರ್ರಹ್ಮಾನ್ ಮದನಿ ಉಸ್ತಾದ್ ಬನ್ನೂರು, ಅಬ್ಬಾಸ್ (ಪ್ರೆಸ್) ಬನ್ನೂರು ಹಾಗೂ ಜಿಸಿಸಿ ಸುನ್ನೀ ಫ್ರೆಂಡ್ಸ್ ಸದಸ್ಯರಾದ ರಿಯಾಝ್ ಪಾಪ್ಲಿ ಬನ್ನೂರು ಅವರು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com