ಅಲ್ ಐನ್: ನಗರದ ಟ್ರಾಫಿಕ್ ವ್ಯವಸ್ಥೆಯನ್ನು ಕಾರ್ಯಕ್ಷಮತೆಗೊಳಿಸಲು ಮತ್ತು ವಾಹನ ಯಾತ್ರಿಕರ ಸುರಕ್ಷತೆಯನ್ನು ಇನ್ನಷ್ಟು ಖಾತರಿಸಿಗೊಳಿಸಲು ಅಲ್ ಅಫ್ಲಾಜ್ (ನಂಬರ್ 115), ಅಲ್ ಖಸ್ರ್ (ನಂಬರ್ (118), ಅಲ್ ಅಹ್ಲಿಯಾ (ನಂಬರ್ 166), ರೋಟಾನ ಇಂಟರ್‌ಸೆಕ್ಷನ್ ಎನ್ನುವ ನಾಮದೇಯದಲ್ಲಿ ತಿಳಿಯಲ್ಪಡುವ ನಂಬರ್ 177 ಮುಂತಾದವುಗಳನ್ನು ಸಂಚಾರಕ್ಕಾಗಿ ಮುಕ್ತಗೊಳಿಸಲಾಗಿದೆ ಎಂದು ಅಲ್ ಐನ್ ಸಿಟಿ ಮುನಿಸಿಪಾಲಿಟಿ ಎಸಿಎಂ, ಅಬುಧಾಬಿ ಜನರಲ್ ಸರ್ವೀಸಸ್ ಕಂಪೆನಿ ಮುಸಾನದ ಸಂಯುಕ್ತವಾಗಿ ತಿಳಿಸಿದೆ.
ಅಲ್ ಐನ್‌ನ ನಗರ ಪ್ರದೇಶಗಳಲ್ಲಿ 43.8 ಕೋಟಿ ದಿರ್ಹಂ ವೆಚ್ಚದಲ್ಲಿ ಮುಸಾನದ ಜಾರಿಗೆ ತರುತ್ತಿರುವ ಯೋಜನೆ ಇದಾಗಿದೆ. ಅಬುಧಾಬಿ ಇಂಟಗರೇಟಡ್ ಟ್ರಾನ್ಸ್‌ಪೋರ್ಟ್ ಸೆಂಟರ್ ಐಟಿಸಿ, ಅಬುಧಾಬಿ ಪೊಲೀಸ್ ಕಾರ್ಯಾಲಯ ಪಿಎಚ್ ಕ್ಯು ಇವುಗಳ ಸಹಭಾಗಿತ್ವದಲ್ಲಿ ಯೋಜನೆ ಜಾರಿಯಾಗುತ್ತಿದೆ.
ಇದು ಪ್ರದೇಶದ ರಸ್ತೆಗಳ ಟ್ರಾಫಿಕ್ ಚಲನ ಸಂಯೋಜನೆಗೆ ಅನುಗುಣವಾಗಲಿದೆ. ರಸ್ತೆಗಳು ನೀಡುವ ಸೇವೆಗಳ ಮಟ್ಟವನ್ನು ಹೆಚ್ಚಿಸುವುದು ಯೋಜನೆಯ ಉದ್ದೇಶವಾಗಿದೆ ಎಂದು ಐಟಿಸಿಯ ಪ್ರಕಟನೆ ತಿಳಿಸಿದೆ. ಹೊಸ ರಸ್ತೆಗಳ ಅಭಿವೃದ್ಧಿಯು ಎಮಿರೇಟ್ಸ್‌ನ ಆರ್ಥಿಕ, ಸಾಮಾಜಿಕ, ಪರಿಸರ ಅಭಿವೃದ್ಧಿ ಪ್ರಕ್ರಿಯಗೆ ಬಲ ನೀಡಲಿದೆ. ಮತ್ರವಲ್ಲದೆ ಹೆಚ್ಚಾದ ಜನಸಂಖ್ಯೆ ಮತ್ತು ನಗರಾಭಿವೃದ್ಧಿಗೆ ಸಂಭಂಧಿಸಿದ ಸುರಕ್ಷಿತ ಹಾಗೂ ಸ್ಥಿರವಾದ ಸಂಚಾರ ವ್ಯವಸ್ಥೆ ಜಾರಿಗೆ ತರುವ ಮೂಲಕ ಅಬುಧಾಬಿ ಎಮಿರೇಟ್ಸ್‌ನ ಮೇಲ್ಮೈ ಸಂಚಾರ ಮಾಸ್ಟರ್ ಪ್ಲಾನ್‌ನ ಅವಶ್ಯವನ್ನು ಕಾರ್ಯಗತಗೊಳಿಸುವ ಪರಿಶ್ರಮಗಳನ್ನು ಹೊಸ ಯೋಜನೆ ಬೆಂಬಲಿಸಲಿದೆ ಎಂದು ಐಟಿಸಿ ತಿಳಿಸಿದೆ.
ಅಲ್ ಐನ್ ನಗರದಲ್ಲಿ ಜಾರಿಗೆ ಬರಲಿರುವ ಯೋಜನೆಯು ಚಾಲಕರು ಮತ್ತು ರಸ್ತೆಬದಿಯ ಯಾತ್ರಿಕರಿಗೆ ಹೆಚ್ಚಿನ ಸುರಕ್ಷತೆಯನ್ನು ನೀಡಲಿದೆ ಎಂದು ಅಬುಧಾಬಿ ಪೊಲೀಸ್ ಜಿಎಚ್‌ಕ್ಯು ಬರವಸೆ ನೀಡಿದೆ.















ಇನ್ನಷ್ಟು ಸುದ್ದಿಗಳು
ದುಬೈ-ಇಸ್ರೇಲ್ ವಿಮಾನದಲ್ಲಿ ಪೈಲಟ್ಗಳ ನಡುವೆ ಸಂಘರ್ಷ : ಸೌದಿಯಲ್ಲಿ ತುರ್ತು ಭೂಸ್ಪರ್ಶ
ಅಣು-ವಿಕಿರಣ ಸೋರಿಕೆಯಾದರೆ ಏನು ಮಾಡಬೇಕು?; ಜಾಗರೂಕತೆಯ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ CDAA
ಒಮಾನ್:ಕಾರ್ಮಿಕ ಕಾಯ್ದೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ- ಫೀಲ್ಡ್ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವಾಲಯ
ರಸ್ತೆ ಬದಿಯ ಪೈಪ್ ಸರಿಪಡಿಸಿದ ಭಾರತೀಯ ಡೆಲಿವರಿ ಯುವಕ – ದುಬೈ ಸರ್ಕಾರದ ಗೌರವ
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ