janadhvani

Kannada Online News Paper

ಸೌದಿ : ಮುಂದಿನ ರಮಝಾನಿಂದ ಚಂದ್ರ ದರ್ಶನ ನಿರ್ಣಯಕ್ಕೆ ಹೊಸ ಸಂವಿಧಾನ

ರಿಯಾದ್: ಸೌದಿ ಅರೇಬಿಯಾದಲ್ಲಿ ಮುಂದಿನ ವರ್ಷದಿಂದ ಅರಬಿಕ್ ತಿಂಗಳ ನಿರ್ಣಯಕ್ಕಾಗಿ ಹೊಸ ಸಂವಿಧಾನ ರೂಪಿಸಲಾಗುತ್ತಿದ್ದು, ಮಕ್ಕಾದ ಹೊಸ ಗಡಿಯಾರ ಗೋಪುರದಲ್ಲಿ ಮುಂದಿನ ರಮಝಾನಿನಿಂದ ಗಗನ ನಿರೀಕ್ಷಣಾ ಕೇಂದ್ರವನ್ನು ಸ್ಥಾಪಿಸಲು ತೀರ್ಮಾನ ಕೈಗೊಳ್ಳಲಾಗಿದೆ.

ರಮಝಾನ್, ಶವ್ವಾಲ್ ತಿಂಗಳ ನಿರ್ಣಯ ಸಹಿತ ಎಲ್ಲ ಅರೆಬಿಕ್ ತಿಂಗಳುಗಳ ಆಗಮನವನ್ನು ಕ್ಲಿಪ್ತವಾಗಿ ವೀಕ್ಷಿಸಲು ಅತ್ಯಾಧುನಿಕ ಟೆಲಿಸ್ಕೋಪ್‌ಗಳನ್ನು ಸಜ್ಜುಗೊಳಿಸಲಾಗುವುದು ಎಂದು ಉನ್ನತ ಅಧಿಕಾರಿಗಳು ತಿಳಿಸಿರುವುದಾಗಿ ‘ಅಲ್ ಬಯಾನ್’ ಪತ್ರಿಕೆ ವರದಿ ಮಾಡಿದೆ.

ವಿಶ್ವದ ಇತರ ಗಗನ ನಿರೀಕ್ಷಣಾ ಏಜನ್ಸಿಗಳ ಸಹಕಾರದೊಂದಿಗೆ ಕಾರ್ಯಾಚರಿಸಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.

error: Content is protected !! Not allowed copy content from janadhvani.com