ಸೌದಿ: ಮತ್ತೆ ಮೂರು ವಿಭಾಗ ಮನೆ ಕೆಲಸಗಾರರಿಗೆ ವಿಸಾ ಅನುಮತಿ

ರಿಯಾದ್: ಸೌದಿ ಅರೇಬಿಯಾಕೆ ಮೂರು ವಿಭಾಗದ ಮನೆ ಕೆಲಸಗಾರರನ್ನು ರಿಕ್ರೂಟ್ ಮಾಡಲು ಅನುಮತಿ ನೀಡಲಾಗಿದೆ. ಖಾಸಗಿ ತರಬೇತಿ ಅಧ್ಯಾಪಕ, ಫಿಸಿಯೋತೆರಪಿಸ್ಟ್, ಸ್ಪೀಚ್ ತೆರಾಪಿಸ್ಟ್ ಮುಂತಾದವರನ್ನು ಕೆಲಸಕ್ಕಾಗಿ ಕರೆತರಲು ದೇಶೀಯ ಪ್ರಜೆಗಳಿಗೆ ಅನುಮತಿ ನೀಡಲಾಗಿದೆ.

ಪ್ರಸಕ್ತ ಮನೆ ಚಾಲಕ, ಹೋಂ ನರ್ಸ್, ಮನೆಕೆಲಸದವರು ಮುಂತಾದ ನಾಲ್ಕು ವಿಭಾಗಕ್ಕೆ ಮಾತ್ರ ಅನುಮತಿ ನೀಡಲಾಗಿತ್ತು. ಹಲವಾರು ಅನಿವಾಸಿಗಳಿಗೆ ಈ ಮೂಲಕ ಸಹಾಯಕವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಕಾರ್ಮಿಕ ವಿಸಾದ ಕಾಲಾವಧಿಯನ್ನು ಒಂದು ವರ್ಷದಿಂದ ಎರಡು ವರ್ಷಗಳ ವರೆಗೆ ನೀಡುವ ಯೋಜನೆಯನ್ನೂ ಕಾರ್ಮಿಕ ಸಚಿವಾಯ ಪ್ರಾರಂಭಿಸಿದೆ. ಇದಕ್ಕೆ ಹೆಚ್ಚಿನ ಮೊತ್ತ ನೀಡಬೇಕಾದ ಅಗತ್ಯವಿಲ್ಲ.
ಸ್ವದೇಶೀಕರಣದ ಭಾಗವಾಗಿ ಕಾಲಾವಧಿಯನ್ನು ಒಂದು ವರ್ಷವಾಗಿ ಸೀಮಿತಗೊಳಿಸಲಾಗಿತ್ತು. ಸ್ವದೇಶೀಕರಣವನ್ನು ಪಾಲಿಸಿದ ಸಂಸ್ಥೆಗಳಿಗೆ ಶೀಘ್ರ ಮತ್ತು ಸುಲಭದಲ್ಲಿ ವಿಸಾ ಅನುಮತಿಸುವ ಯೋಜನೆಗೂ ಸಚಿವಾಲಯ ಚಾಲನೆ ನೀಡಿದೆ.

Leave a Reply

Your email address will not be published. Required fields are marked *

error: Content is protected !!