janadhvani

Kannada Online News Paper

ಬಳ್ಳಾರಿಗೆ ತೆರಳಲು ಜನಾರ್ದನ ರೆಡ್ಡಿಗೆ ಸುಪ್ರೀಂ ಕೋರ್ಟ್ ಅನುಮತಿ

ನವದೆಹಲಿ: ತವರು ಬಳ್ಳಾರಿಗೆ ತೆರಳಲು ಜನಾರ್ದನ ರೆಡ್ಡಿಗೆ ಸುಪ್ರೀಂ ಕೋರ್ಟ್ ರಜಾ ಕಾಲದ ಪೀಠ ಅನುಮತಿ ನೀಡಿದೆ. ಪಾಶ್ವವಾಯುನಿಂದ ಬಳಲುತ್ತಿರುವ ಮಾವನನ್ನು ನೋಡಲು ರೆಡ್ಡಿಗೆ ನ್ಯಾಯಾಲಯ ಅನುಮತಿ ನೀಡಿದೆ.

ಅಕ್ರಮ ಗಣಿಗಾರಿಕೆ ಪ್ರಕರಣ ಸಂಬಂಧ ಜಾಮೀನು ಮೇಲೆ ಹೊರಗಿರುವ ಜನಾರ್ದನ ರೆಡ್ಡಿ ಅವರು ಬಳ್ಳಾರಿಗೆ ತೆರಳದಂತೆ ವಿಧಿಸಲಾಗಿದ್ದ ಷರತ್ತನ್ನು ಸುಪ್ರೀಂಕೋರ್ಟ್ ಎರಡು ವಾರಗಳ ಕಾಲ ಸಡಿಲಿಸಿದೆ.

ಜನಾರ್ದನ ರೆಡ್ಡಿ ಮನವಿ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ರಜಾಕಾಲದ ಪೀಠ, ಜೂನ್ 8ರಿಂದ ಎರಡು ವಾರಗಳ ಕಾಲ ಬಳ್ಳಾರಿಗೆ ತೆರಳಲು ಅನುಮತಿ ನೀಡಿದೆ. ಜೊತೆಗೆ ಜನಾರ್ದನ ರೆಡ್ಡಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸದ ಸಿಬಿಐ ಯನ್ನು ಸುಪ್ರೀಂಕೋರ್ಟ್ ತರಾಟೆಗೆ ತೆಗೆತುಕೊಂಡಿತು.

ಗಣಿ ಕೇಸ್ನಲ್ಲಿ ಜೈಲುಪಾಲಾಗಿ ಬಿಡುಗಡೆಯಾದ ಬಳಿಕ ಇದೇ ಮೊದಲ ಬಾರಿಗೆ ರೆಡ್ಡಿ ಬಳ್ಳಾರಿಗೆ ಮರಳಲಿದ್ದಾರೆ.

error: Content is protected !! Not allowed copy content from janadhvani.com