janadhvani

Kannada Online News Paper

ಈ ವರದಿಯ ಧ್ವನಿಯನ್ನು ಆಲಿಸಿ


ನವದೆಹಲಿ, ಜೂ. 5: ದೇಶಾದ್ಯಂತ ಇಂದು ಮುಸ್ಲಿಮ್ ಸಮುದಾಯ ಈದುಲ್ ಫಿತ್ರ್ ಆಚರಿಸುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ನಾಗರಿಕರಿಗೆ ಶುಭ ಕೋರಿದ್ದಾರೆ.

ಟ್ಟೀಟ್ ಮೂಲಕ ಶುಭಾಷಯ ಕೋರಿರುವ ಮೋದಿ, ತಮ್ಮ ಸಹಿ ಇರುವ ಶುಭಾಷಯ ಪತ್ರವನ್ನು ಹಂಚಿಕೊಂಡಿದ್ದಾರೆ.
“ಈದ್-ಉಲ್-ಫಿತರ್ ಶುಭ ಸಂದರ್ಭದಲ್ಲಿ ಎಲ್ಲರಿಗೂ ಶುಭಾಷಯಗಳು. ಇಂದಿನ ವಿಶೇಷ ದಿನ ನಮ್ಮ ಸಮಾಜದಲ್ಲಿ ಸೌಹಾರ್ಧತೆ, ಕರುಣೆ ಹಾಗೂ ಶಾಂತಿಯ ಭಾವನೆಗಳನ್ನು ಹೆಚ್ಚಿಸಲಿ. ಎಲ್ಲರಿಗೂ ಖುಷಿ ಸಿಗಲಿ. ಎಲ್ಲರಿಗೂ ಈದ್ -ಉಲ್-ಫಿತರ್ ಶುಭಾಷಯ” ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬುಧವಾರ ಈದ್-ಉಲ್-ಫಿತರ್ ಅಂಗವಾಗಿ ಮುಸ್ಲಿಂ ಬಾಂಧವರಿಗೆ ಶುಭ ಕೋರಿದ್ದಾರೆ.

“ದೇಶವಾಸಿಗಳಿಗೆ ಈದ್ ಉಲ್ ಫಿತರ್ ನ ಶುಭ ಕಾಮನೆಗಳು, ಈ ಹಬ್ಬವು ಎಲ್ಲರ ಜೀವನದಲ್ಲೂ ಶಾಂತಿ, ಉಲ್ಲಾಸ ಹಾಗೂ ಸಂತಸ ತರಲಿ” ಎಂದು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com