ದುಬೈ: ಈದ್ ರಜೆಯ ಪ್ರಯುಕ್ತ ಈ ವಾರಾಂತ್ಯದಲ್ಲಿ ವಿಮಾನ ನಿಲ್ದಾಣದಲ್ಲಿ ಜನಸಂದಣಿ ಉಂಟಾಗಲಿದೆ ಎಂದು ಎಮಿರೇಟ್ಸ್ ತಿಳಿಸಿದೆ. ಶುಕ್ರವಾರ 80,000 ಮಂದಿ ಮೂರನೇ ಟರ್ಮಿನಲ್ ಮೂಲಕ ಯಾತ್ರೆ ಹೊರಟಿದ್ದಾರೆ. ಜನಸಂದಣಿ ಉಂಟಾಗಲಿರುವುದನ್ನು ಮನಗಂಡು ಯಾತ್ರಿಕರು ಸಮಯಕ್ಕಿಂತ ಮುಂಚಿತವಾಗಿ ಆಗಮಿಸುವಂತೆ ಎಮಿರೇಟ್ಸ್ ಮತ್ತು ಏರ್ ಇಂಡಿಯಾ ವ್ಯಕ್ತಪಡಿಸಿದೆ.
ಜೂನ್ 3 ಸೋಮವಾರದ ವರೆಗೆ ಜನಸಂದಣಿ ಮುಂದುವರಿಯಲಿದ್ದು, ಈ ದಿನಗಳಲ್ಲಿ ದುಬೈ ವಿಮಾನ ನಿಲ್ದಾಣದ ಮೂಲಕ 3,09,000 ಪ್ರಯಾಣಿಕರು ಯಾತ್ರೆ ಕೈಗೊಳ್ಳಲಿದ್ದಾರೆ. ಇದರ ಜೊತೆಗೆ ವಿಮಾನ ನಿಲ್ದಾಣಕ್ಕೆ ಆಗಮಿಸುವ ಹಲವು ರಸ್ತೆಗಳ ಕಾಮಗಾರಿ ಕೂಡ ನಡೆಯುತ್ತಿದೆ. ಆದ್ದರಿಂದ ಮೂರು ಗಂಟೆ ಮುಂಚಿತವಾಗಿ ಯಾತ್ರಿಕರು ವಿಮಾನ ನಿಲ್ದಾಣಕ್ಕೆ ತಲುಪಬೇಕಿದೆ.
ಆರು ಗಂಟೆ ಮುಂಚಿತವಾಗಿ ಯಾತ್ರಿಕರಿಗೆ ತಮ್ಮ ಲಗ್ಗೇಜ್‌ಗಳನ್ನು ಚೆಕ್ ಇನ್ ಮಾಡಬಹುದಾಗಿದೆ. ಕುಟುಂಬಗಳಿಗಾಗಿ ಮೂರನೇ ಟರ್ಮಿನಲ್ ನಲ್ಲಿ ಪ್ರತ್ಯೇಕ ಕೌಂಟರ್ ತೆರೆಯಲಾಗಿದೆ. ವಿಮಾನ ಹೊತಡುವುದಕ್ಕಿಂತ ಒಂದು ತಾಸು ಮುಂಚಿತವಾಗಿಯಾದರೂ ರಿಪೋರ್ಟ್ ಮಾಡದವರನ್ನು ಯಾತ್ರೆ ಹೊರಡುವುದಕ್ಕೆ ಸಮ್ಮತಿಸಲಾಗದು ಎಂದು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಸಮಯವನ್ನು ಲಾಭಿಸುವುದಕ್ಕಾಗಿ ಯಾತ್ರಿಕರು ಆನ್ ಲೈನ್ ಮೂಲಕವೂ ಚೆಕ್ ಇನ್ ಮಾಡಬಹುದಾಗಿದೆ. ಹೊರಡುವುದಕ್ಕೆ ನಲವತ್ತೈದು ನಿಮಿಷಗಳ ಮುಂಚಿತವಾಗಿ ಬೋರ್ಡಿಂಗ್ ಪ್ರಾರಂಭಗೊಳ್ಳಲಿದ್ದು, ಇಪ್ಪತ್ತು ನಿಮಿಷಗಳ ಮುಂಚೆ ಗೇಟ್‌ಗಳನ್ನು ಬಂದ್ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನಷ್ಟು ಸುದ್ದಿಗಳು
ವಾಟ್ಸಾಪ್ ಬಳಕೆದಾರರಿಗೆ ಸೌದಿ ಹಣಕಾಸು ಸಚಿವಾಲಯ ಎಚ್ಚರಿಕೆ
ಬಸ್ ನಲ್ಲಿ ಕಿರುಕುಳ: ಯುವತಿಯ ಪೋಸ್ಟ್ ಸಾಮಾಜಿಕ ತಾಣದಲ್ಲಿ ವೈರಲ್
ವಾಟ್ಸ್ಆ್ಯಪ್ ಹೊಸ ಗೌಪ್ಯತೆ ನೀತಿ: ದೆಹಲಿ ಹೈಕೋರ್ಟ್ನಲ್ಲಿ ಅರ್ಜಿ
ಖುರ್ಆನ್ ವಿರುದ್ಧ ಮತಿಗೆಟ್ಟ ಹೇಳಿಕೆ ನೀಡಿದ ಸ್ವಾಮೀಜಿ- ಕಠಿಣ ಕ್ರಮಕ್ಕೆ ಮುಸ್ಲಿಂ ಒಕ್ಕೂಟ ಆಗ್ರಹ
ಝಂಝಂ ಲೇಬಲಿನಲ್ಲಿ ಸಾದಾ ನೀರು ವಿತರಣೆ – ವಿದೇಶೀಯರ ಬಂಧನ
ಅತೃಪ್ತರು ಇಲ್ಲ ಸಲ್ಲದ ಆರೋಪ ಮಾಡಬೇಡಿ, ಕೇಂದ್ರಕ್ಕೆ ದೂರು ನೀಡಿ- ಬಿಎಸ್ ವೈ