janadhvani

Kannada Online News Paper

ಯುಎಇ: ಧೂಮಪಾನದಿಂದ ಶ್ವಾಸಕೋಶಕ್ಕೆ ಮಾತ್ರವಲ್ಲ ಜೇಬಿಗೂ ರಂಧ್ರ ಬೀಳಲಿದೆ – ಎಚ್ಚರಿಕೆ

ದುಬೈ: ಧೂಮಪಾನಿಗಳ ಸಂಖ್ಯೆಯನ್ನು ಕಡಿಮೆಗೊಳಿಸಲು ಕಠಿಣ ಕ್ರಮ ಕೈಗೊಳ್ಳುತ್ತಿರುವ ರಾಷ್ಟರವಾಗಿದೆ ಯುಎಇ. ಸಾರ್ವಜನಿಕ ಸ್ಥಳದಲ್ಲಿ ದೂಮಪಾನ ನಿಷೇಧಿಸಿರುವ ಯುಎಇಯು ಕಳೆದ ವರ್ಷ ತಂಬಾಕು ಉತ್ಪನ್ನಗಳ ಮೇಲೆ 100 ಶೇಕಡಾ ಎಕ್ಸೈಸ್ ತೆರಿಗೆಯನ್ನೂ ಹೇರಿದೆ. ಇಂತಹ ಕ್ರಮಗಳಿಂದಾಗಿ ಯುಎಇಯಲ್ಲಿ ಧೂಮಪಾನಿಗಳ ಸಂಖ್ಯೆಯು ಗಣನೀಯವಾಗಿ ಕಡಿಮೆಯಾಗಿದೆ ಎನ್ನಲಾಗಿದೆ.

ಹೊಗೆ ಬತ್ತಿ ಸೇದುವ ಅಭ್ಯಾಸ ಇರುವವರು ಸಿಗರೇಟ್ ಹೊರತೆಗೆಯುವ ಮುನ್ನ ಮತ್ತೊಮ್ಮೆ ಯೋಚಿಸಿವುದು ಉತ್ತಮ. ಧೂಮಪಾನ ನಿಷೇಧಿಸಲಾದ ದೇಶವಾದ ಯುಎಇಯಲ್ಲಿ ಕಾನೂನು ಉಲ್ಲಂಘನೆಗೆ ಗುರಿಯಾದರೆ ಭಾರೀ ದಂಡವನ್ನು ಪಾವತಿಸಬೇಕಾಗುತ್ತದೆ.

ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಸಂಸ್ಥೆಗಳು ಕೂಡ ಕಟ್ಟುನಿಟ್ಟಾಗಿ ಕಾನೂನುಗಳನ್ನು ಪಾಲಿಸಬೇಕು. ಶೀಷ, ಇಲೆಕ್ಟ್ರಾನಿಕ್ ಸಿಗರೇಟ್ ಮುಂತಾದವುಗಳಿಗೂ ಯುಎಇಯಲ್ಲಿ ನಿಯಂತ್ರಣವಿದೆ.

ಇದರ ಹೊರತಾಗಿ ಕಳೆದ ವರ್ಷದಿಂದ ತಂಬಾಕು ಉತ್ಪನ್ನಗಳ ಮೇಲೆ ಪಾಪ ಕೃತ್ಯಗಳಿಗೆ ಹೇರಲಾಗುವ ತೆರಿಗೆಯ ಮಾದರಿಯಲ್ಲಿ 100 ಶೇಕಡಾ ತೆರಿಗೆಯನ್ನೂ ಹೇರಿದೆ. ಧೂಮಪಾನ ಉಪೇಕ್ಷಿಸದಿದ್ದಲ್ಲಿ ಓರ್ವ ಸರಾಸರಿ ಧೂಮಪಾನಿಯ ಶ್ವಾಸಕೋಶಕ್ಕೆ ಮಾತ್ರವಲ್ಲ ಜೇಬಿಗೂ ತೂತು ಬೀಳಲಿದೆ.

error: Content is protected !! Not allowed copy content from janadhvani.com