janadhvani

Kannada Online News Paper

ಮಸೀದಿಗಳ ಪರಿಸರ ಅನಧಿಕೃತ ವಾಹನ ನಿಲುಗಡೆ- ಭಾರೀ ದಂಡ

ಶಾರ್ಜಾ: ಮಸೀದಿಗಳ ಸುತ್ತ ಅನಧಿಕೃತವಾಗಿ ನಿಲ್ಲಿಸಲಾಗಿದ್ದ ಹಲವಾರು ವಾಹನಗಳ ಮಾಲಕರಿಗೆ 500 ದಿರ್ಹಂ ದಂಡ ವಿಧಿಸಲಾಗಿದೆ. ಶಾರ್ಜಾದಲ್ಲಿ ತರಾವೀಹ್ ನಮಾಝಿಗಾಗಿ ಬಂದವರ ಪೈಕಿ ಹಸಾಡ್ ಲೈಟ್ ಹಾಕಿ ನಿಲ್ಲಿಸಿದವರಿಗೆ ಈ ದಂಡ ವಿಧಿಸಲಾಗಿದೆ.

ಸಂಚಾರಕ್ಕೆ ಅಡಚಣೆ ಉಂಟಾಗುವ ರೀತಿಯಲ್ಲಿ ವಾಹನ ನಿಲ್ಲಿಸಿದರೆ ಅಂತವರ ವಿರುದ್ದ 500 ದಿರ್ಹಂ ದಂಡ ವಿಧಿಸಲಾಗುತ್ತದೆ. ಅಲ್ಲದೆ ನಾಲ್ಕು ಬ್ಲ್ಯಾಕ್ ಪಾಯಿಂಟ್‌ಗಳನ್ನೂ ನೀಡಲಾಗುತ್ತದೆ. ರಮಝಾನ್ ಪ್ರಾರಂಭಗೊಳ್ಳುವ ಮೊದಲೇ ಈ ಬಗ್ಗೆ ಪೊಲೀಸರು ಜಾಗೃತಿ ಮೂಡಿಸಿದ್ದರು. ಮಸೀದಿಯ ಪರಿಸರದ ಪಾರ್ಕಿಂಗ್ ಪ್ರದೇಶದಲ್ಲೂ ಹೆಚ್ಚಿನ ಸಮಯ ಪಾರ್ಕ್ ಮಾಡಿದರೂ ದಂಡ ವಿಧಿಸಲಾಗುತ್ತದೆ.

ಕಿಂಗ್ ಫೈಝಲ್ ರಸ್ತೆ ಮತ್ತಿತರ ಪ್ರದೇಶಗಳಲ್ಲಿರುವ ಮಸೀದಿಗಳಲ್ಲಿ ಇತ್ತೀಚೆಗೆ ಪೊಲೀಸರು ಪರಿಶೋಧನೆಯನ್ನು ತ್ವರಿತಗೊಳಿಸಿದ್ದಾರೆ. ಮಸೀದಿಗಳ ಸುತ್ತ ಅನಧಿಕೃತ ವ್ಯಾಪಾರ, ಭಿಕ್ಷಾಟನೆ ಇತ್ಯಾದಿಗಳು ಕಂಡು ಬಂದರೆ ದಂಡ ವಿಧಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

error: Content is protected !! Not allowed copy content from janadhvani.com