janadhvani

Kannada Online News Paper

ಹಜ್ ನಿರ್ವಹಣೆಗಾಗಿ ಆಗಮಿಸುವ ಯಾರನ್ನೂ ತಡೆಯುವುದಿಲ್ಲ- ಸೌದಿ

ಈ ವರದಿಯ ಧ್ವನಿಯನ್ನು ಆಲಿಸಿ


ಜಿದ್ದಾ: ಪವಿತ್ರ ಹಜ್ ನಿರ್ವಹಣೆಗಾಗಿ ಆಗಮಿಸುವ ಯಾರನ್ನೂ ತಡೆಯುವುದಿಲ್ಲ ಎಂದು ಸೌದಿ ಅರೇಬಿಯಾ ವ್ಯಕ್ತಪಡಿಸಿದೆ. ಅದೇ ವೇಳೆ ಹಜ್ ಕರ್ಮವನ್ನು ರಾಜಕೀಯಗೊಳಿಸಲು ಅನುಮತಿಸಲಾಗದು, ಖತರ್ ನಾಗರಿಕರಿಗೆ ನಿಷೇಧವಿಲ್ಲ ಎಂದು ಸೌದಿ ಅರೇಬಿಯಾ ತಿಳಿಸಿದೆ.

ಹಜ್, ಉಮ್ರಾ ಖಾತೆಯ ಡೆಪ್ಯುಟಿ ಸಚಿವರಾದ ಡಾ.ಅಬ್ದುಲ್ ಫತ್ತಾಹ್ ಮುಶಾತ್ ಈ ಬಗ್ಗೆ ಮಾತನಾಡಿ, ಹಜ್ ಕರ್ಮವನ್ನು ಯಾವುದೇ ಕಾರಣಕ್ಕೂ ರಾಜಕೀಯಗೊಳಿಸುವುದಕ್ಕೆ ಸೌದಿ ಅರೇಬಿಯಾ ಒಪ್ಪುವುದಿಲ್ಲ ಎಂದಿದ್ದಾರೆ. ಹಜ್, ಉಮ್ರಾ ಮುಂತಾದ ಪುಣ್ಯ ಕರ್ಮಗಳ ಅನುಷ್ಠಾನವನ್ನು ಸೌದಿ ಅರೇಬಿಯಾ ಯಾರಿಗೂ ನಿಷೇಧಿಸುವುದಿಲ್ಲ. ಅದು ವಿಶ್ವಾಸಿಗಳ ಹಕ್ಕಾಗಿದ್ದು, ಹಿಂದೆಯೂ ಈ ಬಗ್ಗೆ ಯಾರಿಗೂ ನಿಷೇಧ ಏರ್ಪಡಿಸಲಾಗಿರಲಿಲ್ಲ ಎಂದು ಅಬ್ದುಲ್ ಫತ್ತಾಹ್ ಮುಶಾತ್ ಹೇಳಿದರು.

ವಿವಿಧ ದೇಶಗಳಿಂದ ಹಲವಾರು ಮಂದಿ ಹಜ್ ಮತ್ತು ಉಮ್ರಾಗಾಗಿ ಸೌದಿ ಅರೇಬಿಯಾ ತಲುಪುತ್ತಿದ್ದಾರೆ. ಯಾತ್ರಾರ್ಥಿಗಳಿಗೆ ಯಾವುದೇ ಅನಾನುಕೂಲ ಉಂಟಾಗದ ವ್ಯವಸ್ಥೆಯನ್ನು ಸೌದಿ ಸಜ್ಜುಗೊಳಿಸುತ್ತಿದೆ. ಇತರ ಹಜ್ ಯಾತ್ರಿಕರನ್ನು ಬರಮಾಡಿಕೊಳ್ಳುವಂತೆ ಖತರ್ ಯಾತ್ರಿಕರನ್ನೂ ಬರಮಾಡಿಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

error: Content is protected !! Not allowed copy content from janadhvani.com