janadhvani

Kannada Online News Paper

ಸೌದಿ ಅರೇಬಿಯಾದ ನಿರ್ಜನ ಪ್ರದೇಶದಲ್ಲಿ ಡಕಾಯಿತರ ಹಾವಳಿ- ಎಚ್ಚರಿಕೆ

ರಿಯಾದ್: ಇಲ್ಲಿನ ನಿರ್ಜನ ಪ್ರದೇಶದಲ್ಲಿ ಪ್ರಯಾಣಿಸುವವರನ್ನು ಅಡ್ಡಗಟ್ಟಿ ದರೋಡೆಗೈಯ್ಯುತ್ತಿರುವ ಘಟನೆಗಳು ಹೆಚ್ಚುತ್ತಿದ್ದು ಅನಿವಾಸಿಗಳು ಎಚ್ಚರಿಕೆ ವಹಿಸುವಂತೆ ಸಮಾಜ ಸೇವಾ ಸಂಘಟನೆಗಳು ತಿಳಿಸಿವೆ.

ಮೇ.13 ರಂದು ಅಲ್ ಹಸ್ಸಾದಿಂದ ಕೆಲಸ ನಿಮಿತ್ತ ರಿಯಾದ್ ಗೆ ತೆರಳಿದ್ದ ದ.ಕ.ಜಿಲ್ಲೆಯ ಕಾಜೂರು ನಿವಾಸಿಯೊಬ್ಬರನ್ನು ರಿಯಾದ್ ನ ಬತ್ತಾದಲ್ಲಿ ಕಾರಿನಲ್ಲಿ ಬಂದ ನಾಲ್ವರು ಡಕಾಯಿತರು ತಲವಾರು ಮತ್ತು ರಾಡ್ ತೋರಿಸಿ ತನ್ನ ಬಳಿಯಿದ್ದ ಬೆಲೆಬಾಳುವ ಮೊಬೈಲ್, ನಗದು , ಇಖಾಮಾ, ಡ್ರೈವಿಂಗ್ ಲೈಸನ್ಸ್ ಹಾಗೂ ತನ್ನ ಕಾರಿನ ದಾಖಲೆಗಳನ್ನು ದೋಚಿ ಪರಾರಿಯಾಗಿದ್ದಾರೆ.

ಬತ್ತಾ ಪೋಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ, ರಿಯಾದ್ ನಿಂದ ತನ್ನ ವೃತ್ತಿ ಸ್ಥಳವಾದ ಅಲ್ ಹಸ್ಸಾಕೆ ತೆರಳಲು ಅಗತ್ಯವಾದ ದಾಖಲೆಗಳನ್ನು ಪಡೆದು ಮರಳಿದ್ದಾರೆ.

ಇದಕ್ಕೂ ಮುನ್ನ ಮಂಗಳೂರಿನ ಉಳ್ಳಾಲ ನಿವಾಸಿಯಾದ ಇಮ್ರಾನ್ ಎಂಬವರು ತಮಗುಂಟಾದ ಅನುಭವವನ್ನು ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದರು.

ರಿಯಾದಿನ ಸುಲೈ ನಿಂದ ಬತ್ತ ಎಂಬ ಪ್ರದೇಶಕ್ಕೆ ಟ್ಯಾಕ್ಸಿಯಲ್ಲಿ ಹೋಗುವಾಗ ಟ್ಯಾಕ್ಸಿಯಲ್ಲಿದ್ದ ಚಾಲಕ ಪಾಕಿಸ್ತಾನಿ ಪ್ರಜೆ ಮತ್ತು ಮೂವರು ಕರಿಯರು(ಕರ್ಪ) ನನ್ನನ್ನು ಅಪಹರಿಸಿ ದರೊಡೆಗೈಯಲು ಪ್ರಯತ್ನಿಸಿದರು. ದೇವರ ದಯೆಯಿಂದ ಅವರಿಂದ ತಪ್ಪಿಸಿ ನಾನು ಜನಜಂಗುಳಿ ಇರುವ ಕಡೆಗೆ ಧಾವಿಸಿದೆನು

ಸೌದಿ ಅರೇಬಿಯಾದಲ್ಲಿರುವ ಅನಿವಾಸಿ ಭಾರತೀಯರಲ್ಲಿ ಹಲವಾರು ಮಂದಿ ಇಂತಹ ದರೊಡೆಗೆ ಒಳಗಾಗಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ನೀವು
ಯಾವುದೇ ಅಪರಿಚಿತರ ವಾಹನಕ್ಕೆ ಹತ್ತುವಾಗ ವಾಹನದ ನಂಬರನ್ನು ಗುರುತಿಸಿ ಅಥವಾ ನಿಮ್ಮ ಗೆಳೆಯರಿಗೆ ವಾಟ್ಸಾಪ್ ಮಾಡಿ. ಅಥವಾ ಯಾವುದೇ ವಾಹನಕ್ಕೆ ಹತ್ತುವಾಗ ನಿಮಗೆ ಸಂಶಯ ಬಂದರೆ ನೀವು ಅಂತಹ ವಾಹನದಲ್ಲಿ ಪ್ರಯಾಣವನ್ನು ಮುಂದುವರಿಸಬೇಡಿ

ನಿಮ್ಮಲ್ಲಿರುವ ದೊಡ್ಡ ಮೊತ್ತದ ಹಣವನ್ನು ಬ್ಯಾಂಕ್ ನಲ್ಲಿಡಿ ಮತ್ತು ಬೆಲೆಬಾಳುವ ಮೊಬೈಲ್ ಗಳನ್ನು ರಸ್ತೆಯಲ್ಲಿ ಹೋಗುವಾಗ ಅಥವಾ ಟ್ಯಾಕ್ಸಿಯಲ್ಲಿ ಹೋಗುವಾಗ ಕೈಯಲ್ಲಿ ಅವರಿಗೆ ತೋಚುವಂತೆ ಉಪಯೋಗಿಸಬೇಡಿ. ನೀವು ದರೊಡೆಗೆ ಒಳಗಾಗುವ ಸಾಧ್ಯತೆ ಇದೆ.ಇಂತಹ ಸನ್ನಿವೇಶಗಳು ನಿಮಗೆ ಎದುರಾದರೆ ಪ್ರತಿರೋಧ ಮಾಡಲು ಪ್ರಯತ್ನಿಸಿ ಅಥವಾ ಸಮೀಪದ ಜನಜಂಗುಳಿ ಇರುವ ಪ್ರದೇಶಕ್ಕೆ ಓಡುವ ಪ್ರಯತ್ನ ಮಾಡಿ.ದರೋಡೆ ಕೊರರಿಂದ ತಪ್ಪಿಸಿ ಬಂದು ನನ್ನ ಅನುಭವವನ್ನು ನಿಮ್ಮ ಮುಂದೆ ಇಟ್ಟಿದ್ದೇನೆ” ಎಂದು ಇಮ್ರಾನ್ ವಿವರಿಸಿದ್ದರು.

ರಮಝಾನ್ ಹಾಗೂ ಬಿಸಿಲ ಝಗೆಯ ಕಾರಣ ಮಧ್ಯಾಹ್ನ ಹೊತ್ತಿನಲ್ಲಿ ಯಾರೂ ಮನೆಯಿಂದ ಹೊರಬಾರದ ಕಾರಣ ದರೋಡೆಕೋರರು ಇದೇ ಸಮಯವನ್ನು ಹೆಚ್ಚಾಗಿ ದುರುಯೋಗಪಡಿಸುತ್ತಿದ್ದಾರೆ.

ರಿಯಾದ್ ನಲ್ಲಿರುವ ಅನಿವಾಸಿ ಭಾರತೀಯರಿಗೆ ಈ ಅನುಭವ ಮಾಮೂಲಾಗಿ ಪರಿಣಮಿಸಿದೆ ಆದರೂ ಹೊರಗಿನಿಂದ ಬರುವ ಯಾತ್ರಿಕರಿಗೆ ಇದರ ಬಗ್ಗೆ ತಿಳಿದಿರುವುದಿಲ್ಲ .

ಎರಡು ದಿನದ ಮುಂಚೆ ಪಾಕಿಸ್ತಾನಿಯೊಬ್ಬನಿಂದ ಹಣ ಲೂಟಿ ಮಾಡುವಾಗ ಪ್ರತಿರೋಧಿಸಿದಕ್ಕಾಗಿ ಅವನ ತಲೆಗೆ ಕತ್ತಿಯಿಂದ ಕಡಿಯಲಾಗಿದೆ ಎಂದು ಪಾಕಿಸ್ತಾನೀ ಪ್ರಜೆಯೊಬ್ಬರು ಮಾಹಿತಿ ನೀಡಿದರು.

ಒಬ್ಬಂಟಿಯಾಗಿ ಯಾತ್ರೆ ಮಾಡದಿರಿ, ಆದಷ್ಟು ಜನ ಜಂಗುಳಿ ಇರುವ ಸ್ಥಳಗಳಲ್ಲಿ ಮತ್ತು ಗೆಳೆಯರೊಂದಿಗೆ ನಡೆಯಿರಿಯ, ಒಬ್ಬಂಟಿಯಾಗಿ ನಡೆದಾಡುವಾಗ ಬೆಲೆಬಾಳುವ ಮೊಬೈಲುಗಳನ್ನು ಮತ್ತು ಹಣಗಳನ್ನು ರೂಮಿನಲ್ಲಿಡಿ, ಜಾಗ್ರತೆ ವಹಿಸಿ ತಮ್ಮ ಗೆಳಯರಿಗೂ ಈ ಬಗ್ಗೆ ಮಾಹಿತಿ ನೀಡಿ ಎಂದು ಸಮಾಜ ಸೇವಕರು ಸಾಮಾಜಿಕ ತಾಣದಲ್ಲಿ ಎಚ್ಚರಿಕೆ ನೀಡಿದ್ದಾರೆ.

error: Content is protected !! Not allowed copy content from janadhvani.com