ಇಂಡಿಯನ್ ಗ್ರ್ಯಾಂಡ್ ಮುಫ್ತಿಗೆ ಕುವೈತ್ ನಲ್ಲಿ ಅದ್ದೂರಿ ಸನ್ಮಾನ

ಕುವೈತ್: ಇಂಡಿಯನ್ ಗ್ರಾಂಡ್ ಮುಪ್ತಿಯಾಗಿ ನೇಮಕಗೊಂಡ ನಂತರ ಪ್ರಥಮ ಬಾರಿಗೆ ಕುವೈತ್ ತಲುಪಿದ ಅಖಿಲ ಭಾರತ ಸುನ್ನೀ ಜಂಇಯತ್ತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರನ್ನು ಸಂಘಟನಾ ಕುಟುಂಬ ಮತ್ತು ಕುವೈತ್‌ನ ಪ್ರಮುಖರು ಸೇರಿ ಸನ್ಮಾನಿಸಿದ್ದಾರೆ.

ನಿರ್ದಿಷ್ಟ ಆರಾಧನಾ ಕರ್ಮಗಳನ್ನು ಕ್ರಮಬದ್ಧವಾಗಿ ಮತ್ತು ಸಮರ್ಪಣಾ ಮನೋಭಾವದಿಂದ ನಿರ್ವಹಿಸುವುದರೊಂದಿಗೆ ಸಹವರ್ತಿಗಳೊಂದಿಗೆ ಕರುಣೆ, ಸಹಕಾರಯುಕ್ತ ಜೀವನ ನಿರ್ವಹಣೆ ಸಾಧ್ಯವಾಗಬೇಕೆಂದು ಅವರು ಅಭಿನಂದನೆ ಸ್ವೀಕರಿಸಿದ ಬಳಿಕ ನಡೆದ ಭಾಷಣದಲ್ಲಿ ತಿಳಿಸಿದರು.

ಸಾಮಾಜಿಕ ಜೀವಿ ಎನ್ನುವ ಸ್ವಂತ ಬಾಧ್ಯತೆಯಿಂದ ದೂರ ಉಳಿದು, ಯಾರಿಗೂ ಮುಸಲ್ಮಾನ ಎನ್ನುವ ನೆಲೆಯಲ್ಲಿ ತನ್ನ ಪ್ರತಿನಿಧಿತ್ವವನ್ನು ನಿರ್ವಹಿಸಲು ಸಾಧ್ಯವಿಲ್ಲ. ಅಮಾಯಕರನ್ನು ಕೊಂದು ಹಾಕುವುದಕ್ಕೆ ಧರ್ಮದ ಹೆಸರಿನಲ್ಲಿ ಕಾರಣ ಹುಡುಕುವವರು ಪವಿತ್ರ ಇಸ್ಲಾಮ್ ಧರ್ಮ ಕಲಿಸುವ ಸಂಪೂರ್ಣ ಸಂದೇಶಗಳ ವಿಪರೀತ ದಿಸೆಯಲ್ಲಿ ಸಂಚರಿಸುವವರಾಗಿದ್ದಾರೆ. ಅವರಿಗೆ ಪವಿತ್ರ ಧರ್ಮದ ಇತಿಹಾಸ, ಪುರಾವೆಗಳಲ್ಲಿ ಯಾವುದೇ ಬೆಂಬಲ ಇಲ್ಲ. ದ್ವೇಷದ ತತ್ವಶಾಸ್ತ್ರಗಳನ್ನು ಇಸ್ಲಾಮಿನ ಲೇಬಲ್ ಅಂಟಿಸಿ, ಪ್ರಸ್ತುತಪಡಿಸುವುದರಲ್ಲಿರುವ ಅಪಾಯದಿಂದ ಜಾಗರೂಕರಾಗುವಂತೆ ಅವರು ಎಚ್ಚರಿಕೆ ನೀಡಿದರು.

ಅಬ್ಬಾಸಿಯಾ ಇಂಡಿಯನ್ ಸೆಂಟ್ರಲ್ ಸ್ಕೂಲ್‌ನಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ನೂರಾರು ಮಂದಿ ಭಾಗವಹಿಸಿದ್ದರು.

ಸಮಸ್ತ ಕೇಂದ್ರ ಮುಶಾವರ ಸದಸ್ಯ ತಾಝಪ್ರ ಮುಹಿಯುದ್ದೀನ್ ಕುಟ್ಟಿ ಮುಸ್ಲಿಯಾರ್ ಉಪಸ್ಥಿತರಿದ್ದರು. ಕುವೈತ್ ಐಸಿಎಫ್ ಅಧ್ಯಕ್ಷ ಅಬ್ದುಲ್ ಹಕೀಂ ದಾರಿಮಿ ಅಧ್ಯಕ್ಷತೆ ವಹಿಸಿದ್ದರು. ಉಬೈದುಲ್ಲಾ ಸಖಾಫಿ ಉದ್ಘಾಟನೆ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಡಾ.ಮುಹಮ್ಮದ್ ಕುಂಞಿ ಸಖಾಫಿ ಪ್ರವಚನ ನೀಡಿದರು. ಕುವೈತ್ ‌ನ ಪ್ರಮುಖರು, ಐಸಿಎಫ್, ಆರ್‌ಎಸ್ಸಿ ನಾಯಕರು ಪಾಲ್ಗೊಂಡಿದ್ದರು.

ಕೆಸಿಎಫ್ ಸನ್ಮಾನ:

ಕುವೈತ್ ಸಿಟಿ: ಭಾರತದ ಗ್ರಾಂಡ್ ಮುಫ್ತಿ ಯಾಗಿ ಕುವೈತ್ ರಾಷ್ಟ್ರಕ್ಕೆ ಪ್ರಥಮ ಭೇಟಿ ಕೊಟ್ಟ ಸಂದರ್ಭ ಕುವೈತ್ ಅರ್ದಿಯಾ ಜುಮಾ ಮಸೀದಿಯಲ್ಲಿ
ತರಾವೀಹ್ ನಮಾಝಿನ ಬಳಿಕ ಬಾರತದ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಶೈಖುನಾ ಎ.ಪಿ.ಉಸ್ತಾದ್ ರವರನ್ನು ಕರ್ನಾಟಕ ಕಲ್ಚರಲ್ ಫೌೌಂಡೇಶನ್ ರಾಷ್ಟ್ರೀಯ ಸಮಿತಿಯ ವತಿಯಿಂದ ಗೌರವ ನೀಡಿ ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com
error: Content is protected !!