ರಿಯಾದ್: ಸೌದಿ ಅರೇಬಿಯಾದಲ್ಲಿರುವ ವಿದೇಶೀಯರಿಗೆ ಎರಡು ಬಗೆಯ ಇಖಾಮಾಗಳನ್ನು ನೀಡಲು ಚಿಂತನೆ ನಡೆಸಿದ್ದು, ಸಚಿವಾಲಯದ ಸಲಹಾ ಸಮಿತಿ ‘ಶೂರಾ’ ಕೌನ್ಸಿಲ್ ಈ ಕರಡಿಗೆ ಅಂಗೀಕಾರ ನೀಡಿದೆ.
ಎಲ್ಲಾ ಸವಲತ್ತುಗಳೊಂದಿಗೆ ರೆಸಿಡೆನ್ಸಿಯಲ್ ಪರ್ಮಿಟ್ ವಿದೇಶೀಯರಿಗೆ ನೀಡಲಾಗುತ್ತದೆ. ಪ್ರವಿಲೇಜ್ ವಿಭಾಗದ ಇಖಾಮಾಗೆ ವಿವಿಧ ಸವಲತ್ತುಗಳು ಲಭಿಸಲಿದೆ. ಪ್ರಸಕ್ತ ಚಲಾವಣೆಯಲ್ಲಿರುವ ಇಖಾಮಾದ ಹೊರತಾಗಿ ಮತ್ತೊದು ದರ್ಜೆಯ ಇಖಾಮಾ ವಿದೇಶೀಯರಿಗೆ ಲಭಿಸಲಿದೆ. ಶೂರಾ ಅನುಮತಿ ನೀಡಿದ್ದರೂ, ಪ್ರಿವಿಲೇಜ್ ವಿಭಾಗದ ಇಖಾಮಾಗೆ ಹೆಚ್ಚಿನ ಸಮಯಾವಕಾಶ ಬೇಕಾಗಿದ್ದು, ಇದಕ್ಕಾಗಿ ಕೆಲವು ನಿಬಂಧನೆಗಳು ಇವೆ ಎನ್ನಲಾಗಿದೆ.
ಈ ವಿಭಾಗದ ಇಖಾಮಾ ಲಭಿಸುವವರಿಗೆ ಫ್ಯಾಮಿಲಿ ಸ್ಟೇಟಸ್ ಲಭಿಸಲಿದ್ದು, ಅಂತವರ ಸಂಬಂಧಿಕರಿಗೆ ಸಂದರ್ಶಕ ವಿಸಾ ಲಭಿಸಲಿದೆ. ಸೌದಿಯಲ್ಲಿ ಆಸ್ತಿಗಳನ್ನು ಸ್ವಂತವಾಗಿಸಲು ಮತ್ತು ಮನೆಕೆಲಸದವರನ್ನು ಕರೆತರಲು ಅನುಮತಿ ದೊರಕಲಿದೆ.
ಸೌದಿಯ ಆರ್ಥಿಕತೆಗೆ ಲಾಭ ಉಂಟುಮಾಡಬಲ್ಲ ಹೂಡಿಕೆದಾರರಾದ ಅನಿವಾಸಿಯರಿಗೆ ಈಗ ಪ್ರವಿಲೇಜ್ ಇಖಾಮಾ ನೀಡಲು ಶೂರಾ ಅಂಗೀಕಾರ ನೀಡಿದ್ದು, ವಿದೇಶೀ ಹೂಡಿಕೆದಾರರು ಮತ್ತು ಉದ್ಯಮಿಗಳನ್ನು ಸೌದಿ ಅರೇಬಿಯಾಗೆ ಆಕರ್ಷಿಸಲು ಈ ನಡೆ ಎನ್ನಲಾಗಿದೆ.