SYS ಮತ್ತು SSF ಹೂಹಾಕುವಕಲ್ಲು ಶಾಖೆಯಿಂದ ರಮಳಾನ್ ಕಿಟ್ ವಿತರಣೆ

ಹೂಹಾಕುವಕಲ್ಲು ಶಾಖೆಯು ಪ್ರತೀ ವರ್ಷದಂತೆ ಈ ವರ್ಷವೂ ಕೂಡಾ ಅರ್ಹ ಕುಟುಂಬಗಳಿಗೆ ಅಗತ್ಯ ದಿನಸಿ ಸಾಮಾನುಗಳನ್ನು ಒಳಗೊಂಡ ಸುಮಾರು 53 ರಷ್ಟು ಬಹು ವೆಚ್ಚದ ರಮಳಾನ್ ವಿಶೇಷ ಕಿಟ್ ವಿತರಿಸಲಾಯಿತು.

ಶಾಖೆಯ ಮುಂಭಾಗದಲ್ಲಿ ನಡೆದ ಸರಳ ಕಾರ್ಯಕ್ರಮದ ಅಧ್ಯಕ್ಷತೆಯನ್ನು SYS ಬ್ರಾಂಚ್ ಅಧ್ಯಕ್ಷರಾದ ಮೊಹಿದಿನ್ ಕುಂಞಿ ತೋಟಾಲ್ ವಹಿಸಿದ್ದರು. ಬದ್ರಿಯಾ ಜುಮಾ ಮಸ್ಜಿದ್ ಹೂಹಾಕುವಕಲ್ಲು ಖತೀಬರಾದ ಬಹು! ರಫೀಕ್ ಅಹ್ಸನಿ ಕಕ್ಕೆಪದವು ಉಸ್ತಾದರು ಉದ್ಘಾಟಿಸುತ್ತಾ ಶಾಖೆಯ ಸಾಂತ್ವನ ಕಾರ್ಯಕ್ರಮಗಳನ್ನು ಪ್ರಶಂಸಿದರು.

ಕಾರ್ಯಕ್ರಮಕ್ಕೆ ಬಾಳೆಪುಣಿ ಸೆಕ್ಟರ್ ಅಧ್ಯಕ್ಷರಾದ ಸಿದ್ದೀಕ್ ಸಖಾಫಿ ಕಾಯಾರ್, ಪ್ರ.ಕಾರ್ಯದರ್ಶಿ ಝೈನುದ್ದೀನ್ ಇರಾ ಶುಭ ಹಾರೈಸಿದರು. ಶಾಖಾ ಅಧ್ಯಕ್ಷ ಉಸ್ಮಾನ್ ಎನ್ ಸೇರಿದಂತೆ ಹಲವು ಶಾಖಾ ನಾಯಕರು ಉಪಸ್ಥಿತರಿದ್ದರು. ಕಿಟ್ ಗಳನ್ನು ಅರ್ಹರ ಮನೆಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿತ್ತು.

ಪ್ರತಿ ವರ್ಷವೂ ಹೂಹಾಕುವಕಲ್ಲು ಶಾಖೆಯು ಯಾವುದೇ ಪ್ರಚಾರದ ಆಡಂಬರವಿಲ್ಲದೆ ನಡೆಸಿಕೊಂಡು ಬರುತ್ತಿರುವ ಈ ಕಾರ್ಯಕ್ರಮವು ಮುಡಿಪು ಪ್ರದೇಶದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com
error: Content is protected !!