ಎಲಿಮಲೆಯಲ್ಲಿ ರಮಳಾನ್ ಕಿಟ್ ವಿತರಣೆ ಹಾಗೂ ಇಫ್ತಾರ್ ಕೂಟ

ನುಸ್ರತುಲ್ ಇಸ್ಲಾಮ್ ಎಸೋಸಿಯೇಶನ್ ರಿ ಎಲಿಮಲೆ ಇದರ ಆಶ್ರಯದಲ್ಲಿ
ಹಿರಿಯ ವಿಧ್ವಾಂಸ ಮರ್ಹೂಮ್ ಪಿಟಿ ಉಸ್ತಾದರ ಅನುಸ್ಮರಣೆ ಹಾಗೂ ಬಡ ಕುಟುಂಬಗಳಿಗೆ ರಮಳಾನ್ ಕಿಟ್ ವಿತರಣೆ ಮತ್ತು ಇಫ್ತಾರ್ ಸಂಗಮ ವು ಎಲಿಮಲೆಯಲ್ಲಿ ಜರುಗಿತು.

ಮಸೀದಿ ಮತ್ತು ಇನ್ನಿತರ ಸಂಘ ಸಂಸ್ಥೆಗಳಲ್ಲಿ ಸೇವೆಗೈದು ಮರಣ ಹೊಂದಿದವರಿಗಾಗಿ ಮತ್ತು ಸೇರಿದವರ ಕುಟುಂಬಸ್ಥರ ಪರಲೋಕ ಮೋಕ್ಷಕ್ಕಾಗಿ ತಹಲೀಲ್ ಸಮರ್ಪಣೆ ಹಾಗೂ ಪ್ರಾರ್ಥನಾಕೂಟವು ನಡೆಯಿತು.

ಪ್ರಾರ್ಥನೆಯ ನೇತ್ರತ್ವವನ್ನು ಎಲಿಮಲೆ ಮುದರ್ರಿಸರಾದ ಅಬ್ದುಲ್ ರಝಾಕ್ ಸಖಾಫಿ ಕಳಂಜಿಬೈಲು ಇವರು ವಹಿಸಿದ್ದರು.

ತದನಂತರ ಜಮಾ ಅತಿಗೊಳಪಟ್ಟ ಬಡ ಕುಟುಂಬಗಳಿಗೆ ರಮಳಾನ್ ಕಿಟ್ ಗಳನ್ನು ವಿತರಿಸಿ ಮಾತನಾಡಿದ ಅಬ್ದುಲ್ ರಝಾಕ್ ಸಖಾಫಿ ಉಸ್ತಾದ ರು ದೇಶದ ನಾನಾ ಭಾಗದಲ್ಲಿ ನೀರು ಮತ್ತು ಆಹಾರಕ್ಕಾಗಿ ನಮ್ಮ ಸಹೋದರರು ಪರಿತಪಿಸುತ್ತಿರುವಾಗ ಬಡವರ ಬಗ್ಗೆ ಕಾಳಜಿ ವಹಿಸಿ ರಮಳಾನ್ ಕಿಟ್ ಗಳನ್ನು ನೀಡುವ ಮೂಲಕ ಸಂಸ್ಥೆಯು ಬಡವರಿಗೆ ಆಸರೆಯಾಗುತ್ತಿರುವುದು ಶ್ಲಾಘನೀಯ ಎಂದರು .

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನುಸ್ರತ್ ಅಧ್ಯಕ್ಷ ಲತೀಫ್ ಹರ್ಲಡ್ಕ ವಹಿಸಿದ್ದರು.
ಜಮಾಅತ್ ಕಮಿಟಿ ಅಧ್ಯಕ್ಷ ಇಕ್ಬಾಲ್ ಎಲಿಮಲೆ ಮುಖ್ಯ ಅತಿಥಿಗಳಾಗಿದ್ದರು.
ಕಾರ್ಯಕ್ರಮದಲ್ಲಿಜಮಾತ್ ಉಪಾಧ್ಯಕ್ಷ ಅಬ್ದುಲ್ ಕಾದರ್ ಪಾಣಾಜೆ, ಜಮಾ ಅತ್ ಕಾರ್ಯದರ್ಶಿ ಹನೀಫ್ ಮೆತ್ತಡ್ಕ, ಕೋಶಾಧಿಕಾರಿ ಮಹಮದ್ ಕುಂಞ ಮೇಲೆಬೈಲು ಸ್ಥಳೀಯ ಮದ್ರಸ ಮುಖ್ಯೋಪಾಧ್ಯಾಯರಾದ ಮಹಮೂದ್ ಸಖಾಫಿ, ಜೀರ್ಮಕ್ಕಿ ಇಮಾಂ ಸೂಫಿ ಮುಸ್ಲಿಯಾರ್, ಜೀರ್ಮಕ್ಕಿ ಮಸೀದಿ ಸಮಿತಿ ಅಧ್ಯಕ್ಷ ಜಿ ಎಸ್ ಅಬ್ದುಲ್ಲ.. ಮೆತ್ತಡ್ಕ ಸದರ್ ಅಬ್ದುಲ್ ಸಲಾಂ ಮುಸ್ಲಿಯಾರ್ ಹಿರಿಯರಾದ ಎ ಎಂ ಅಬ್ಬಾಸ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ನುಸ್ರತ್ ಉಪಾಧ್ಯಕ್ಷ ಕಲಂದರ್ ಎಲಿಮಲೆ, ಸಂಸ್ಥೆಯ ಸದಸ್ಯರಾದ ಹೈದರ್ ಹಾಜಿ,ಹನೀಫ್ ಜೀರ್ಮಕ್ಕಿ, ಇಬ್ರಾಹಿಂ ಪಳ್ಳಿಕ್ಕಲ್, ಕಾದರ್ ಅತ್ತಿಮಾರಡ್ಕ, ಇಕ್ಬಾಲ್ ದೊಡ್ಡಂಗಡಿ..ಸುಲೈಮಾನ್ ಮೆತ್ತಡ್ಕ ಹಾಗೂ ನಾಸಿರ್.ಇರ್ಷಾದ್. ಸಿದ್ದೀಕ್ . ರಶೀದ್. ಅಬ್ಬು. ಮೊದಲಾದವರು ಸಹಕರಿಸಿದರು..

ಕಾರ್ಯದರ್ಶಿ ಸೂಫಿ ಎಲಿಮಲೆ ಕಾರ್ಯಕ್ರಮ ನಿರ್ವಹಿಸಿದರು..ನಂತರ ನಡೆದ ಇಫ್ತಾರ್ ಕೂಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉಪವಾಸಿಗರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com
error: Content is protected !!