janadhvani

Kannada Online News Paper

ರಮಝಾನ್ ಪ್ರಯುಕ್ತ ಸೌದಿ ಅರೇಬಿಯಾದ ಜೈಲಿನಿಂದ ಮೋಚನೆ ಭಾಗ್ಯ

ರಿಯಾದ್: ರಮಝಾನ್ ಪ್ರಯುಕ್ತ ಸೌದಿ ಅರೇಬಿಯಾದಲ್ಲಿ ಸಾರ್ವಜನಿಕ ಕ್ಷಮಾಪಣೆ ಭಾಗವಾಗಿ ಕೆಲವು ಖೈದಿಗಳಿಗೆ ಜೈಲಿನಿಂದ ಮುಕ್ತಿ ದೊರೆಯಲಿದೆ. ಮುಂದಿನ ದಿನಗಳಲ್ಲಿ ವಿದೇಶೀಯರು ಸೇರಿದಂತೆ ಮುಕ್ತಿ ದೊರೆಯಲಿರುವವರ ಪಟ್ಟಿಗೆಗೆ ಸಲ್ಮಾನ್ ರಾಜ ಅನುಮೋದನೆ ನೀಡಲಿದ್ದು, ಸಾವಿರಕ್ಕಿಂತಲೂ ಹೆಚ್ಚಿನ ಖೈದಿಗಳಿಗೆ ಮುಕ್ತಿ ದೊರೆಯಲಿದೆ.

ರಮಝಾನ್ ಭಾಗವಾಗಿ ಸೌದಿಯ ಆಡಳಿತಾಧಿಕಾರಿ ಸಲ್ಮಾನ್ ರಾಜ ಸಾರ್ವಜನಿಕ ಕ್ಷಮಾಪಣೆಗೆ ಆದೇಶ ನೀಡಲಿದ್ದು,ಕಳೆದ ವರ್ಷ ಇದೇ ಅವಧಿಯಲ್ಲಿ 1148 ಮಂದಿಗೆ ಬಂಧನದಿಂದ ಮುಕ್ತಿ ನೀಡಿದ್ದರು. ರಾಜನ ಆದೇಶದಂತೆ ಪ್ರತೀ ದಿನ ಅರ್ಹನ ಪಟ್ಟಿಯನ್ನು ತಯಾರು ಗೊಳಿಸಲಾಗುತ್ತದೆ.

ಇದರ ಅನುಸಾರ ಬಿಡುಗಡೆ ನಡೆಯಲಿದೆ. ಈ ಪೈಕಿ ವಿದೇಶೀಯರೂ ಸೇರಿದ್ದು, ಅವರನ್ನು ಊರಿಗೆ ಕಳುಹಿಸಲಾಗುತ್ತದೆ. ಸೆರೆವಾಸದ ಅರ್ಧದಷ್ಟು ಮುಗಿಸಿದವರೂ ಈ ಪಟ್ಟಿಯಲ್ಲಿ ಸೇರಲಿದ್ದಾರೆ. ಐದು ಲಕ್ಷ ರಿಯಾಲ್‌ಗಿಂತ ಹೆಚ್ಚಿನ ಹಣ ಭಾದ್ಯತೆ ಇರುವವರ ಪ್ರಕರಣಗಳನ್ನು ನ್ಯಾಯಾಲಯ ಮತ್ತು ಆರ್ಥಿಕ ಖಾತೆಯು ಪರಿಶಿಲಿಸಲಿದೆ. ನಂತರ ಅವರ ಬಗ್ಗೆ ತೀರ್ಮಾನ ಉಂಟಾಗಲಿದೆ.

ಮಾನವ ಸಾಗಾಣಿಕೆ, ಬಾಲ ಕಿರುಕುಳ, ದೇಶ ದ್ರೋಹ, ಭಾರೀ ಆರ್ಥಿಕ ವಂಚನೆ ಮುಂತಾದ ಗಂಭೀರ ಆರೋಪ ಹೊತ್ತವರಿಗೆ ಸಾರ್ವಜನಿಕ ಕ್ಷಮಾಪಣೆಯ ಪ್ರಯೋಜನ ದೊರೆಯುವುದಿಲ್ಲ.

error: Content is protected !! Not allowed copy content from janadhvani.com