ರಿಯಾದ್: ರಮಝಾನ್ ತಿಂಗಳಲ್ಲಿ ಕೆಲಸದ ಸಮಯವನ್ನು ಕಡಿತಗೊಳಿಸಲಾಗಿದ್ದು, ಅದನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೌದಿ ಕಾರ್ಮಿಕ ಸಚಿವಾಲಯ ಎಚ್ಚರಿಕೆ ನೀಡಿದೆ. ಖಾಸಗಿ ಸ್ಥಾಪನೆಗಳಲ್ಲಿ 6ಗಂಟೆಗಳು ವೃತ್ತಿ ಸಮಯವಾಗಿದ್ದು, ಅಧಿಕ ವೇತನ ನೀಡದೆ ಆರು ತಾಸುಗಿಂತ ಹೆಚ್ಚು ದುಡಿಸುವುದು ಕಾನೂನಿನ ಉಲ್ಲಂಘನೆಯಾಗಿ ಪರಿಗಣಿಸಲಾಗುವುದು.
ದೇಶದ ಖಾಸಗಿ ವಲಯದ ಸ್ಥಾಪನೆಗಳಲ್ಲಿ ವ್ಯತ್ಯಸ್ಥ ಶೆಡ್ಯೂಲ್ ಗಳಾಗಿ ಆರು ತಾಸುಗಳು ವೃತ್ತಿ ಸಮಯವಾಗಿದೆ. ಇದರ ಉಲ್ಲಂಘನೆಯನ್ನು ಮುಂಗಡವಾಗಿ ಕಂಡು ಎಚ್ಚರಿಕೆಯನ್ನು ನೀಡಲಾಗಿದೆ.
ಕಾನೂನಿನಲ್ಲಿ ಈ ಬಗ್ಗೆ ಸ್ಪಷ್ಟವಾದ ಉಲ್ಲೇಖವಿದೆ. ಖಾಸಗಿ ವಲಯಗಳು ಸಮಯ ಪಾಲನೆಯನ್ನು ಕಡೆಗಣಿಸುವುದು ಉಲ್ಲಘನೆಯಾಗುತ್ತದೆ ಎಂದು ಸಚಿವಾಲಯ ಎಚ್ಚರಿಸಿದೆ. ಸರಕಾರೀ ವಲಯದಲ್ಲಿ ವೃತ್ತಿ ಸಮಯ ಐದು ತಾಸುಗಳಾಗಿವೆ. ಬೆಳಗ್ಗೆ 10ರಿಂದ ಅಪರಾಹ್ನ 3 ರ ವರಗೆ ಖಾತೆಗಳು ಮತ್ತು ಆಫೀಸ್‌ಗಳು ಕಾರ್ಯಾಚರಿಸಲಿದೆ.
ರಮಝಾನ್ 24ರಿಂದ ಸರಕಾರಿ ಕಚೇರಿಗಳಿಗೆ ಈದುಲ್ ಫಿತರ್ ನಿಮಿತ್ತ ರಜೆ ಇದ್ದು, ಶವ್ವಾಲ್ ಎಂಟರಿಂದ ತೆರದು ಕಾರ್ಯಾಚರಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.