janadhvani

Kannada Online News Paper

ಕಾನೂನು ಎಲ್ಲರಿಗೂ ಸಮಾನ: ರಂಝಾನಿನಲ್ಲಿ ಹಗಲು ಸಾರ್ವಜನಿಕವಾಗಿ ಆಹಾರ ಸೇವನೆ ನಿಷಿದ್ಧ

ಕುವೈತ್ ಸಿಟಿ: ಪವಿತ್ರ ರಮಝಾನಿನ ಹಗಲು ಸಾರ್ವಜನಿಕವಾಗಿ ಆಹಾರ ಸೇವನೆ ಮಾಡುವವರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ರಮಝಾನ್ ತಿಂಗಳಲ್ಲಿ ಸಾರ್ವಜನಿಕವಾಗಿ ಆಹಾರ ಸೇವನೆ ಮಾಡುವವರು ದಂಡ ಮತ್ತು ಜೈಲು ಶಿಕ್ಷೆಗೆ ಗುರಿಯಾಗ ಬಹುದು ಎಂದು ಸೆಕ್ಯುರಿಟಿ ಅಫೀಸಿಯಲ್ ತಿಳಿಸಿರುವುದಾಗಿ ಗಲ್ಫ್ ನ್ಯೂಸ್ ವರದಿ ಮಾಡಿದೆ.

ಕುವೈತ್ ‌ನ ಕಾನೂನಿನ ಅನ್ವಯ ಹಗಲು ಆಹಾರ ಸೇವನೆಯು ಒಂದು ತಿಂಗಳ ಜೈಲು ಶಿಕ್ಷೆ ಅಥವಾ 100 ದಿನಾರ್ ದಂಡ ಪಾವಸಬೇಕಾಗುಂತಹ ಅಪರಾಧವಾಗಿದೆ ಎಂದು ಗೃಹ ಸಚಿವಾಲಯದ ಪಬ್ಲಿಕ್‌ ರಿಲೇಶನ್ಸ್ ಅಧಿಕಾರಿ ಬ್ರಿಗೇಡಿಯರ್ ತೌಹೀದ್ ಅಲ್ ಬಂದರೀ ತಿಳಿಸಿರುವುದಾಗಿ ಅಲ್ ಅನ್ಬಾ ನ್ಯೂಸ್ ವರದಿಮಾಡಿದೆ.

ಈ ಕಾನೂನು ಮುಸ್ಲಿಂ ಹಾಗೂ ಮುಸ್ಲಿಮೇತರರಿಗೂ ಅನ್ವಯಿಸುತ್ತದೆ ಎಂದಿರುವ ಬ್ರಿಗೇಡಿಯರ್ ತೌಹೀದ್, ಕುವೈತ್ ದೇಶೀಯರು ಮತ್ತು ವಿದೇಶೀಯರು ಉಪವಾಸಿಗರ ಮಹತ್ವವನ್ನು ಪರಿಗಣಿಸಬೇಕು ಎಂದಿದ್ದಾರೆ.

error: Content is protected !! Not allowed copy content from janadhvani.com