ರಿಯಾದ್: ಸೌದಿ ಅರೇಬಿಯಾದ ಸರ್ವ ಮಸೀದಿಗಳನ್ನು ವೀಕ್ಷಿಸಬಲ್ಲ ಏಕೀಕರಣ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಪ್ರತ್ಯೇಕ ಉಪಕರಣದ ಮೂಲಕ ದೇಶದ ಎಲ್ಲಾ ಮಸೀದಿಗಳಲ್ಲಿ ನಡೆಯುವ ಪ್ರವಚನಗಳು ಮತ್ತು ಸುರಕ್ಷಾ ವ್ಯವಸ್ಥೆ ಗಳನ್ನು ಧಾರ್ಮಿಕ ಖಾತೆಯ ಸಚಿವಾಲಯ ತಿಳಿಯಲಿದೆ ಮುನ್ನೂರರಷ್ಟು ಮಸೀದಿಗಳಲ್ಲಿ ಈ ಉಪಕರಣಗಳನ್ನು ಈಗಾಗಲೇ ಸ್ಥಾಪಿಸಲಾಗಿದೆ.
ಮದೀನಾದ ಧಾರ್ಮಿಕ ಸಚಿವಾಲಯದ ಅಡಿಯಲ್ಲಿ ಪ್ರಾರಂಭಗೊಂಡ ಈ ವ್ಯವಸ್ಥೆಯನ್ನು ದೇಶದಲ್ಲೆಡೆ ವಿಸ್ತರಿಸಲಾಗುತ್ತಿದ್ದು, ಇದರ ಅನುಸಾರವಾಗಿ ಇನ್ನು ಮುಂದೆ ದೇಶದ ಮಸೀದಿಗಳೆಲ್ಲವೂ ಒಂದೇ ನೆಟ್ವರ್ಕ್ ಗೆ ಏಕೀಕರಣಗೊಳ್ಳಲಿದೆ. ಇದಕ್ಕಾಗಿ ಎಲ್ಲಾ ಮಸೀದಿಗಳಲ್ಲೂ ಉಪಕರಣಗಳನ್ನು ಸ್ಥಾಪಿಸಲಾಗುತ್ತಿದೆ.
ಸುರಕ್ಷಾ ವ್ಯವಸ್ಥೆಯ ಪರಿಶೀಲನೆಯೊಂದಿಗೆ ಮಸೀದಿ ಮತ್ತು ಆರಾಧನಾ ವ್ಯವಸ್ಥೆಗೆ ಸಂಬಂಧಿಸಿದ ದೂರುಗಳನ್ನು ಮಸೀದಿಗಳ ಇಮಾಮರು ಈ ಮೂಲಕ ಸಚಿವಾಲಯಕ್ಕೆ ರವಾನಿಸಬಹುದಾಗಿದೆ. ಇದಕ್ಕಾಗಿ ತ್ವರಿತ ಸ್ಪಂದನೆ ಮತ್ತು ಕ್ಯು.ಆರ್. ಕೋಡ್ಗಳನ್ನು ಮಸೀದಿಗಳ ಇಮಾಮ್ಗಳಿಗೆ ನೀಡಲಾಗಿದೆ. ಈಗಾಗಲೇ ಮುನ್ನೂರು ಮಸೀದಿಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬಂದಿದ್ದು, ಈ ವಾರ ಮತ್ತೆ ಮುನ್ನೂರು ಮಸೀದಿಗಳಿಗೆ ಸ್ಥಾಪಿಸಲಾಗಿದೆ. ಬಾಕಿ 1700 ಮಸೀದಿಗಳಲ್ಲಿ ಈ ವ್ಯವಸ್ಥೆಯನ್ನು ಶೀಘ್ರದಲ್ಲೇ ಸ್ಥಾಪಿಸಲಾಗುವುದು ಎಂದು ಅಧಿಕೃತರು ತಿಳಿಸಿದ್ದಾರೆ.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ