janadhvani

Kannada Online News Paper

ದುಬೈ: ಬಾಡಿಗೆ ಒಪ್ಪಂದದ ವಾಯಿದೆ ಮೂರು ವರ್ಷಕ್ಕೆ ಏರಿಕೆ

ದುಬೈ: ಬಾಡಿಗೆ ಒಪ್ಪಂದದ ವಾಯಿದೆಯನ್ನು ಒಂದು ವರ್ಷದಿಂದ ಮೂರು ವರ್ಷವಾಗಿ ಹೆಚ್ಚಿಸಲು ದುಬೈ ಮುಂದಾಗಿದ್ದು, ಈ ಬಗ್ಗೆ ದುಬೈ ಭೂಖಾತೆಯು ನಿರಂತರ ಪರಿಗಣಿಸುತ್ತಿದೆ ಎಂದು ವರದಿಯಾಗಿದೆ.

ಹೊಸ ಒಪ್ಪಂದ ಕಾನೂನಿನಲ್ಲಿ ಮಹತ್ವ ಪೂರ್ಣ ಬದಲಾವಣೆ ತರಲಾಗುತ್ತಿದ್ದು, ಕಟ್ಟಡ ಮಾಲಕರು ಮತ್ತು ಬಾಡಿಗೆದಾರರ ಮಧ್ಯೆ ನಡೆಸಲಾಗುವ ಒಪ್ಪಂದವನ್ನು ಮೂರು ವರ್ಷವಾಗಿ ಹೆಚ್ಚಿಸುವ ಬಗ್ಗೆ ವಿವಿಧ ಇಲಾಖೆಗಳು ಪರಿಶೀಲನೆ ನಡೆಸುತ್ತಿದೆ. ಆದರೆ ಅಂತಿಮ ತೀರ್ಮಾನ ಇನ್ನೂ ಕೈಗೊಳ್ಳಲಾಗಿಲ್ಲ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

ಹೊಸ ಕಾನೂನು ಶೀಘ್ರದಲ್ಲೇ ಘೋಷಣೆಯಾಗಲಿದೆ. ನಿವಾಸ ಕಟ್ಟಡಗಳು, ರಿಯಲ್ ಎಸ್ಟೇಟ್‌ಗೆ ಸಂಬಂಧಿಸಿದ ಪ್ರತ್ಯೇಕ ವಿಭಾಗಗಳು ಮುಂತಾದವುಗಳಲ್ಲಿ ಯಾವ ವಿಭಾಗದಲ್ಲಿ ಹೊಸ ಕಾನೂನು ಜಾರಿಗೆ ಬರಲಿದೆ ಎಂಬುದರ ಬಗ್ಗೆಯೂ ಸ್ಪಷ್ಟನೆ ಇಲ್ಲ.

ಅನಿವಾಸಿಗರು ಮತ್ತು ಹೂಡಿಕೆದಾರರನ್ನು ಆಕರ್ಷಿಸಲು ಬಾಡಿಗೆ ಒಪ್ಪಂದದಲ್ಲಿ ಬದಲಾವಣೆ ತರಬೇಕೆಂಬ ಬೇಡಿಕೆಯು ವಿವಿಧ ಕಡೆಯಿಂದ ಕೇಳಿಬಂದಿತ್ತು. ಫ್ರೀ ಝೋನ್ ‌ನ ಹೊರಗೆ ವಿದೇಶೀಯರಿಗೆ ಸ್ಬತಂತ್ರ ಮಾಲಕತ್ವವನ್ನು ಅನುಮತಿಸುವಷ್ಟು ಉದಾರತೆ ಹೊಸ ಕಾನೂನಿನಲ್ಲಿ ಉಂಟಾಗಬಹುದು ಎನ್ನಲಾಗಿದ್ದು, ಮಾರುಕಟ್ಟೆಯಲ್ಲಿ ಉತ್ಸುಕರಾಗುವ ನಿಟ್ಟಿನಲ್ಲಿ ವಿವಿಧ ಕಡೆ ಗೌರವ ಪೂರ್ಣ ಚರ್ಚೆಗಳು ನಡೆಯುತ್ತಿದೆ.

error: Content is protected !! Not allowed copy content from janadhvani.com