janadhvani

Kannada Online News Paper

ರಿಯಾದ್: ಸುರಕ್ಷತಾ ಕಾರಣಗಳಿಗಾಗಿ ನಾಲ್ಕು ವರ್ಷಗಳಿಂದ ಬಂದ್ ಮಾಡಲಾಗಿದ್ದ ಸೌದಿ ನಜ್‌ರಾನಿನ ವಿಮಾನ ನಿಲ್ದಾಣವನ್ನು ರಮಝಾನ್ ಒಂದರಿಂದ ಮತ್ತೆ ತೆರೆಯಲಾಗುತ್ತಿದೆ. ವಿಮಾನಗಳನ್ನು ಬರಮಾಡಿಕೊಳ್ಳುವ ವಿಧಾನಗಳು ಪೂರ್ತಿಗೊಂಡಿರುವುದಾಗಿ ಸಿವಿಲ್ ಏವಿಯೇಷನ್‌ ಅಥಾರಿಟಿ ತಿಳಿಸಿದೆ.

2011ರಲ್ಲಿ ಪ್ರಾರಂಭಗೊಂಡ ನಜ್‌ರಾನ್ ವಿಮಾನ ನಿಲ್ದಾಣವನ್ನು ಕಳೆದ ನಾಲ್ಕು ವರ್ಷಗಳಿಂದ ಸುರಕ್ಷಾ ಕಾರಣಕ್ಕಾಗಿ ಬಂದ್ ಮಾಡಲಾಗಿತ್ತು. ರಮಝಾನ್ ಒಂದರಿಂದ ಮತ್ತೆ ತೆರೆಯಲಾಗುತ್ತಿದೆ ಎಂದು ಡೆಪ್ಯುಟಿ ಗವರ್ನರ್ ಅಮೀರ್ ತುರ್ಕಿ ಬಿನ್ ಹದ್ಲೂಲ್ ತಿಳಿಸಿದರು.

ಪ್ರಾರಂಭದಲ್ಲಿ ಜಿದ್ದಾ, ರಿಯಾದ್ ಮುಂತಾದ ನಗರಗಳಿಗೆ ಸೌದಿಏರ್ ಲೈನ್ಸ್‌ನ ಒಂದೊಂದು ವಿಮಾನಗಳು ಹಾರಾಟ ನಡೆಸಲಿದೆ. ನಂತರ ಹಾರಾಟದ ಸಂಖ್ಯೆಗಳನ್ನು ಹೆಚ್ಚಿಸಿ, ಇತರ ನಗರಗಳಿಗೂ ವಿಸ್ತರಿಸಲಾಗುವುದು ಎಂದು ಅಥಾರಿಟಿ ತಿಳಿಸಿದೆ. ಪ್ರಸ್ತುತ ಅಬಹಾ ಮೂಲಕ ಈ ವಲಯದವರು ಪ್ರಯಾಣ ಬೆಳಸುತ್ತಿದ್ದಾರೆ ಎನ್ನಲಾಗಿದೆ. ಈ ಕ್ರಮ ಕೈಗೊಂಡ ಅಮೀರ್ ಮುಹಮ್ಮದ್ ಬಿನ್ ಸಲ್ಮಾನ್ ಅವರಿಗೆ ಡೆಪ್ಯುಟಿ ಗವರ್ನರ್ ಅಭಿನಂದನೆ ಸಲ್ಲಿಸಿದ್ದಾರೆ.

error: Content is protected !! Not allowed copy content from janadhvani.com