ದುಬೈ: ಕಳೆದ ಐದು ತಿಂಗಳಲ್ಲಿ 6.3 ಕೋಟಿ ದಿರ್ಹಂ ಮೌಲ್ಯದ ನಕಲಿ ಉತ್ಪನ್ನಗಳನ್ನು ದುಬೈ ಕಸ್ಟಮ್ಸ್ ಮುಟ್ಟುಗೋಲು ಮಾಡಿದೆ. ದೇಶಕ್ಕೆ ಅನಧಿಕೃತವಾಗಿ ರವಾನಿಸಲು ಯತ್ನಿಸುವ ಮಧ್ಯೆ ಈ ಉತ್ಪನ್ನಗಳನ್ನು ಪತ್ತೆಹಚ್ಚಲಾಗಿದ್ದು, 340 ಬಾರಿ ಇಂತಹ ಪ್ರಯತ್ನಗಳನ್ನು ತಡೆಯಲಾಗಿದೆ ಎಂದು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಈ ವರ್ಷ ಜನವರಿಯಿಂದ ಮಾರ್ಚ್ ವರೆಗೆ ಮಾತ್ರ ಒಂದು ಕೋಟಿ ದಿರ್ಹಂ ಮೌಲ್ಯದ ನಕಲಿ ಉತ್ಪನ್ನಗಳು ಪತ್ತೆಯಾಗಿವೆ. ಈ ಪೈಕಿ 16 ರಷ್ಟು ಕಂಪೆನಿಗಳ ಬ್ರಾಂಡ್‌ನ ನಕಲಿ ಉತ್ಪನ್ನಗಳು ಕಂಡುಬಂದಿದೆ. ಈ ಪೈಕಿ ಹೆಚ್ಚಿನವು ಸೌಂಧರ್ಯ ವರ್ಧಕ, ಚರ್ಮ ಕಾಂತಿಗೆ ಉಪಯೋಗಿಸುವ ವಸ್ತುಗಳಾಗಿವೆ ಎನ್ನಲಾಗಿದೆ.
ಬ್ರಾಂಡ್ ಅಧಿಕಾರಿಗಳು, ಕಸ್ಟಮ್ಸ್ ಸಿಬ್ಬಂದಿ, ಶೋಧಕರ ಸಮ್ಮುಖದಲ್ಲಿ ನಕಲಿ ಉತ್ಪನ್ನಗಳ ಪತ್ತೆಹಚ್ಚುವ ಕಾರ್ಯಕ್ಕಾಗಿ 46 ಕಾರ್ಯಾಗಾರವನ್ನು ದುಬೈ ಕಸ್ಟಮ್ಸ್ ವತಿಯಿಂದ ನಡೆಸಿ, ಸಾರ್ವಜನಿಕರೆಡೆಯಲ್ಲಿ ಜಾಗೃತಿ ಮೂಡಿಸಲಾಗಿತ್ತು.