janadhvani

Kannada Online News Paper

ಮೋದಿ, ಶಾ ವಿರುದ್ಧ ಚು,ಆಯೋಗ ನಿಷ್ಕ್ರಿಯ- ಸುಪ್ರೀಮ್ ಮೆಟ್ಟಲೇರಿದ ಕಾಂಗ್ರೆಸ್

ನವದೆಹಲಿ (ಏ. 29): ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡುತ್ತಿದ್ದರೂ ಚುನಾವಣಾ ಆಯೋಗ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್​ ಸಮ್ಮತಿ ಸೂಚಿಸಿದೆ.

ಪ್ರಧಾನಿ ಮೋದಿ ಹಾಗೂ ಅಮಿತ್​ ಶಾ ನೀತಿ ಸಂಹಿತೆ ಉಲ್ಲಂಘಿಸಿದೆ ಈ ಕುರಿತು ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಲಾಗಿದೆ, ಆದರೆ ಆಯೋಗ ಈ ವಿಚಾರಣೆಯಲ್ಲಿ ವಿಳಂಬ ತೋರುತ್ತಿದೆ ಎಂದು ಕಾಂಗ್ರೆಸ್​ ಸಂಸದೆ ಸುಷ್ಮಿತಾ ದೇವ್​ ಸಲ್ಲಿಸಿದ ಅರ್ಜಿ ಸಲ್ಲಿಸಿದ್ದರು.
ಮೋದಿ ವಿರುದ್ಧ ಈ ವರೆಗೆ ದಾಖಲಾಗಿರುವ ಪ್ರಕರಣಗಳ ಕುರಿತು ಚುನಾವಣೆ ಆಯೋಗ ಇನ್ನು 24 ಗಂಟೆಗಳಲ್ಲಿ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಬೇಕು ಎಂದು ಕೋರಿ ಕಾಂಗ್ರೆಸ್‌ ಸಂಸದೆ ಸುಷ್ಮಿತಾ ದೇವ್‌ ಅವರು ಇಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. 

ಈ ಅರ್ಜಿ ಸ್ವೀಕರಿಸಿ ಮಾತನಾಡಿದ ಸುಪ್ರೀಂ ಕೋರ್ಟ್​ ನ್ಯಾಯಮೂರ್ತಿ ರಂಜನ್​ ಗೋಗಯಿ, ಮಂಗಳವಾರ ಈ ಅರ್ಜಿ ವಿಚಾರಣೆ ನಡೆಸಲಾಗುವುದು ಎಂದರು.

ಈ ಕುರಿತು ಶನಿವಾರ ಮಾತನಾಡಿದ್ದ ಕಾಂಗ್ರೆಸ್​ ಹಿರಿಯ ನಾಯಕ ಅಭಿಷೇಕ್​ ಮನು ಸಿಂಘ್ವಿ, ಈಗಾಗಲೇ ನೀತಿ ಸಂಹಿತೆ ಉಲ್ಲಂಘಿಸಿರುವ ಬಗ್ಗೆ ಆಯೋಗಕ್ಕೆ ಕಾಂಗ್ರೆಸ್​ ಪಕ್ಷ ದೂರು ಸಲ್ಲಿಸಿದೆ. ಆದರೂ ಕೂಡ ಚುನಾವಣಾ ಆಯೋಗ ಯಾಕೆ ಮೌನವಹಿಸಿದೆ ಎಂದು ಪ್ರಶ್ನಿಸಿದ್ದಾರೆ.

ಮೋದಿ ಮತ್ತು ಶಾ ಪದೇ ಪದೇ ನೀತಿ ಸಂಹಿತೆ ಉಲ್ಲಂಘಿಸುತ್ತಿದ್ದಾರೆ. ಚುನಾವಣಾ ವೆಚ್ಚ, ಸೇನೆ ಮತ್ತು ಧರ್ಮದ ಹೆಸರಿನಲ್ಲಿ ಮತ ಯಾಚಿಸುತ್ತಿದ್ದಾರೆ. ಈ ಕುರಿತು ಸುಪ್ರೀಂ ಕೋರ್ಟ್​ ಮುಂದೆ ಅರ್ಜಿ ಸಲ್ಲಿಸಲು ಕಾಂಗ್ರೆಸ್​ ಮುಂದಾಗಿದೆ.

ಚುನಾವಣಾ ವೆಚ್ಚ, ಸೇನೆ ಮತ್ತು ಧರ್ಮದ ಹೆಸರಿನಲ್ಲಿ ಮತಯಾಚನೆ ಮಾಡುತ್ತಿದ್ದಾರೆ. ಬಿಜೆಪಿ ಮುಖಂಡರು ವಾರಾಣಸಿಗೆ ಬರಲು 79 ಲಕ್ಷ ರೂ.ಹಾಗೂ ನಾಯಕರ ಹೋಟೆಲ್​ ವಾಸ್ತವ್ಯಕ್ಕೆ 8 ಲಕ್ಷ ರೂ. ಖರ್ಚು, ಸ್ಥಳೀಯ ವಾಹನ ವ್ಯವಸ್ಥೆಗಾಗಿ 6 ಲಕ್ಷ ರೂ.‌ಖರ್ಚು, ಪ್ರಚಾರ ಹಾಗೂ ಕಾರ್ಯಕರ್ತರನ್ನು ಕರೆತರಲು 27 ಲಕ್ಷ ರೂ. ಖರ್ಚು ಸೇರಿದಂತೆ ವಾರಾಣಸಿಯಲ್ಲಿ ರೋಡ್​ಶೋಗೆ 1.27 ಕೋಟಿ ರೂ. ಖರ್ಚು ಮಾಡಲಾಗಿದೆ. ನಿಯಮದ ಪ್ರಕಾರ ಅಭ್ಯರ್ಥಿಯೊಬ್ವ 70 ಲಕ್ಷ ರೂ. ಮಾತ್ರ ಖರ್ಚು ಮಾಡಬೇಕು. ಈ ನಿಯಮ ಉಲ್ಲಂಘನೆ ಆಧಾರದ ಮೇಲೆ ಮೋದಿ ನಾಮಪತ್ರ ರದ್ದುಪಡಿಸುವಂತೆ ಮನವಿ ಮಾಡಲು ಕಾಂಗ್ರೆಸ್​ ಸಿದ್ಧವಾಗಿದೆ.

ಕಾಂಗ್ರೆಸ್​ ಮಾತ್ರವಲ್ಲದೇ ಈ ಕುರಿತು ಆಮ್ ಆದ್ಮಿ ಪಕ್ಷದಿಂದಲೂ ಚುನಾವಣಾ‌ ಆಯೋಗಕ್ಕೆ ದೂರು ಸಲ್ಲಿಸಲಾಗುತ್ತಿದೆ. ಆಪ್ ಮುಖಂಡ ಸಂಜಯ್ ಸಿಂಗ್ ಬಿಜೆಪಿ ಚುನಾವಣಾ ವೆಚ್ಚದ ಕುರಿತು ಈಗಾಗಲೇ ದೂರು ಸಲ್ಲಿಸಿದ್ದು, ಆಪ್ ದೂರನ್ನು ಆಯೋಗ ಪರಿಗಣಿಸದ ಹಿನ್ನೆಲೆಯಲ್ಲಿ ಅವರು ಕೂಡ ಸುಪ್ರೀಂ ಕೋರ್ಟ್​ ಮೊರೆಹೋಗುವ ಸಾಧ್ಯತೆ ಇದೆ ಎನ್ನಲಾಗಿದೆ.

error: Content is protected !! Not allowed copy content from janadhvani.com