ಕೆಸಿಎಫ್ ಒಮಾನ್ ಸೊಹಾರ್ ಝೋನ್ ಇದರ ಎಕ್ಸ್ ಕ್ಯೂಟಿವ್ ಸದಸ್ಯರು, ಫಲಜ್ ಸೆಕ್ಟರ್ ಮಾಜಿ ಅಧ್ಯಕ್ಷರು, ಪ್ರಸ್ತುತ ಆಡಳಿತ ವಿಭಾಗದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ಹಾಗೂ ತನ್ನ ಪ್ರವಾಸಿ ಜೀವನದ ಬಿಡುವು ಸಮಯವನ್ನು ಕೆಸಿಎಫ್ ಗೆ ಬೇಕಾಗಿ ಮುಡಿಪಾಗಿಟ್ಟ ಮುನೀರ್ ಕುತ್ತಾರ್ ರವರು ತಮ್ಮ ಪ್ರವಾಸಿ ಜೀವನಕ್ಕೆ ವಿದಾಯ ಹೇಳಿ ಊರಿಗೆ ಹೊರಟಿರುವ ಈ ಸಂದರ್ಭದಲ್ಲಿ, ನಿನ್ನೆ ನಡೆದ ಕೆಸಿಎಫ್ ಸೊಹಾರ್ ಝೋನ್ ನ ವಾರ್ಷಿಕ ಮಹಾ ಸಭೆಯಲ್ಲಿ ಆತ್ಮೀಯವಾಗಿ ಬೀಳ್ಕೊಡಲಾಯಿತು.
ಪ್ರಸ್ತುತ ಕಾರ್ಯಕ್ರಮದಲ್ಲಿ ಕೆಸಿಎಫ್ ಒಮಾನ್ ರಾಷ್ಟ್ರೀಯ ಗೌರವಾಧ್ಯಕ್ಷರಾದ ಉಮರ್ ಸಖಾಫಿ ಮಿತ್ತೂರು, ಎಜುಕೇಶನ್ ವಿಭಾಗದ ಅಧ್ಯಕ್ಷರಾದ ಅಯ್ಯೂಬ್ ಕೋಡಿ, ಪ್ರಕಾಶನ ವಿಭಾಗದ ಅಧ್ಯಕ್ಷರಾದ ಆರಿಫ್ ಕೋಡಿ, ಸಂಘಟನಾ ಕಾರ್ಯದರ್ಶಿ ಸಿದ್ದೀಕ್ ಮಾಂಬ್ಲಿ ಸುಳ್ಯ, ರಾಷ್ಟ್ರೀಯ ಸಮಿತಿ ಸದಸ್ಯರಾದ ಹಾರಿಸ್ ಕೊಡಗು, ಝೋನ್ ಅಧ್ಯಕ್ಷರಾದ ಸಾದಿಕ್ ಕಾಟಿಪಳ್ಳ, ಪ್ರಧಾನ ಕಾರ್ಯದರ್ಶಿ ಹನೀಫ್ ಉಳ್ಳಾಲ, ಕೊಶಾಧಿಕಾರಿ ಆರಿಫ್ ಮದಕ, ಇಹ್ಸಾನ್ ವಿಭಾಗದ ಅಧ್ಯಕ್ಷ ಇಕ್ಬಾಲ್ ಎರ್ಮಾಳ್, ಸಂಘಟನಾ ಅಧ್ಯಕ್ಷ ಅಶ್ರಫ್ ಕುತ್ತಾರ್, ಪ್ರಕಾಶನ ವಿಭಾಗದ ಅಧ್ಯಕ್ಷ ಶಫೀಕ್ ಎಲಿಮಲೆ ಸುಳ್ಯ, ಎಜುಕೇಶನ್ ವಿಭಾಗದ ಅಧ್ಯಕ್ಷ ಸಿರಾಜುದ್ದೀನ್ ಮುಈನಿ, ಸೊಹಾರ್ ಸೆಕ್ಟರ್ ಅಧ್ಯಕ್ಷ ನಿಸಾರ್ ಜೆಪ್ಪು, ಕೊಶಾಧಿಕಾರಿ ಹೈದರಾಲಿ ಬಂಟ್ವಾಳ
ಹಾಗೂ ಕೆಸಿಎಫ್ ಸೊಹಾರ್ ಝೋನ್ ನಾಯಕರುಗಳು, ಸೆಕ್ಟರ್ ಪಧಾಧಿಕಾರಿಗಳು ಭಾಗವಹಿಸಿದರು.