ಸುರತ್ಕಲ್: ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ ವತಿಯಿಂದ ಓರ್ಬಿಟ್ ಕೆರಿಯರ್ ಗೈಡೆನ್ಸ್ ಕಾರ್ಯಾಗಾರವು ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ ಅಧ್ಯಕ್ಷರಾದ ಫಾರೂಖ್ ಸಖಾಫಿಯವರ ಅಧ್ಯಕ್ಷತೆಯಲ್ಲಿ ಕೃಷ್ಣಾಪುರದ ಅಲ್ ಬದ್ರಿಯಾ ಸ್ಕೂಲಿನಲ್ಲಿ ನಡೆಯಿತು.
ಎಸ್ಸೆಸ್ಸೆಫ್ ದ.ಕ ಜಿಲ್ಲಾ ಮಾಜಿ ಕ್ಯಾಂಪಸ್ ಕಾರ್ಯದರ್ಶಿ ಮುಹಮ್ಮದ್ ಆಸಿಫ್ ಹಾಜಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮಾಸ್ಟರ್ ಉಲ್ಲಾಸ್ ಜೆ ಉಚ್ಚಿಲ ವಿದ್ಯಾರ್ಥಿಗಳಿಗೆ ಸವಿಸ್ತಾರವಾಗಿ ಕ್ಯಾರಿಯರ್ ಗೈಡನ್ಸ್ ಕ್ಲಾಸ್ ನಡೆಸಿದರು.
ಡಿವಿಷನ್ ಅಧ್ಯಕ್ಷರಾದ ಫಾರೂಖ್ ಸಖಾಫಿ ಮೋಟಿವೇಶನ್ ಮತ್ತು ಸಂಘಟನಾ ತರಗತಿ ನಡೆಸಿದರು.
ಬದ್ರಿಯಾ ಸ್ಕೂಲಿನ ಅಧ್ಯಕ್ಷರಾದ ಬಿ.ಎ ನಝೀರ್ ಹಾಜಿ ಹಾಗೂ ಸಂಚಾಲಕ ಎಸ್ ಎಮ್ ಹಮೀದ್ ಸಂದೇಶ ಭಾಷಣ ಮಾಡಿದರು.
ಸಮಾರಂಭದಲ್ಲಿ ಎಸ್ಸೆಸ್ಸೆಫ್ ಜಿಲ್ಲಾ ಸದಸ್ಯರಾದ ಆರಿಫ್ ಝುಹ್ರಿ ಮುಕ್ಕ, ಜಿಲ್ಲಾ ಕಾರ್ಯದರ್ಶಿ ರಫೀಖ್ ಸುರತ್ಕಲ್ ,ಕೆ.ಸಿ.ಎಫ್ ದಮಾಮ್ ಘಟಕದ ನಾಯಕರಾದ ಮನ್ಸೂರ್ ಕಾಟಿಪಳ್ಳ,ಕಾಟಿಪಳ್ಳ ಸೆಕ್ಟರ್ ಅಧ್ಯಕ್ಷರಾದ ಉನೈಸ್,ಕಾಟಿಪಳ್ಳ ಸೆಕ್ಟರ್ ಕ್ಯಾಂಪಸ್ ಕಾರ್ಯದರ್ಶಿ ಖಲೀಲ್ ಕಾಟಿಪಳ್ಳ, ಕೃಷ್ಣಾಪುರ ಸೆಕ್ಟರ್ ಕ್ಯಾಂಪಸ್ ಕಾರ್ಯದರ್ಶಿ ಅಫ್ರಿದ್ ಜಂಕ್ಷನ್, ಮುಲ್ಕಿ ಸೆಕ್ಟರ್ ಕ್ಯಾಂಪಸ್ ಕಾರ್ಯದರ್ಶಿ ರಾಹಿಲ್ ಪಕ್ಷಿಕೆರೆ ಉಪಸ್ಥಿತರಿದ್ದರು.
ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ ಪ್ರ.ಕಾರ್ಯದರ್ಶಿ ಹೈದರಲಿ ಸ್ವಾಗತಿಸಿ, ವಂದಿಸಿದರು.