janadhvani

Kannada Online News Paper

SSF ಉಪ್ಪಿನಂಗಡಿ ಡಿವಿಶನ್ ವತಿಯಿಂದ ಆರ್ಬಿಟ್ ವೃತ್ತಿಮಾರ್ಗದರ್ಶನ ಕಾರ್ಯಾಗಾರ ಮತ್ತು ಕೊಲೋಕಿಯಮ್ ಕ್ಯಾಂಪಸ್

ಉಪ್ಪಿನಂಗಡಿ: ಎಸ್.ಎಸ್.ಎಸ್.ಎಫ್ ರಾಜ್ಯ ಸಮಿತಿಯ ನಿರ್ದೆಶನದಂತೆ ಎಸ್ ಎಸ್.ಎಫ್ ಉಪ್ಪಿನಂಗಡಿ ಡಿವಿಶನ್ ಕ್ಯಾಂಪಸ್ ವತಿಯಿಂದ ಎಸ್.ಎಸ್.ಎಸ್.ಎಫ್ ಉಪ್ಪಿನಂಗಡಿ ಡಿವಿಶನ್ ವ್ಯಾಪ್ತಿಯ ಆರು ಸೆಕ್ಟರ್ ಗಳಾದ ಕುಪ್ಪೆಟ್ಟಿ, ಮೂರುಗೋಳಿ, ಸರಳಿಕಟ್ಟೆ, ಉಪ್ಪಿನಂಗಡಿ, ನೆಲ್ಯಾಡಿ ಹಾಗೂ ಕಡಬ ಸೆಕ್ಜರ್ ವ್ಯಾಪ್ತಿಯ ವಿದ್ಯಾರ್ಥಿಗಳನ್ನು ಕೇಂದ್ರವಾಗಿಟ್ಟುಕೊಂಡು, ಮನ್ಶರ್ ಮಹಿಳಾ ಕಾಲೇಜು-ಕುಪ್ಪೆಟ್ಟಿಯಲ್ಲಿ ಎಸ್. ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಆರ್ಬಿಟ್ – ಎಸ್.ಎಸ್.ಎಸ್.ಎಲ್.ಸಿ ನಂತರ ಮುಂದೇನು? ಹಾಗೂ ವೃತ್ತಿ ಮಾರ್ಗದರ್ಶನ* ಹಾಗೂ ಕ್ಯಾಂಪಸ್ ವಿದ್ಯಾರ್ಥಿಗಳನ್ನು ಗುರಿಯಾಗಿಟ್ಟು ಕೊಂಡು *ಕೊಲೋಕಿಯಂ ಕ್ಯಾಂಪಸ್ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮವನ್ನು ಎಸ್.ಎಸ್.ಎಫ್. ಉಪ್ಪಿನಂಗಡಿ ಡಿವಿಶನ್ ಅಧ್ಯಕ್ಷರಾದ *ಬಹು ಮಸ್ ವೂದ್ ಸ ಅದಿ ಪದ್ಮುಂಜ* ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ.ನಂತರ ಮುಂದೇನು ಮತ್ತು ವೃತ್ತಿಮಾರ್ಗದರ್ಶನ ಎಂಬ ವಿಷಯದ ಕುರಿತು ದ.ಕ.ಜಿ.ಪಂ.ಉ.ಹಿ.ಪ್ರಾ.ಶಾಲಾ ಪದವೀಧರ ಶಿಕ್ಷಕರಾದ ಬಹು ಅಬ್ದುಲ್ ಲತೀಫ್.ಸಿ.ಸರಳಿಕಟ್ಟೆ ರವರು ತರಗತಿ ಮಂಡಿಸಿದರು.

ಎರಡನೇ ಅವಧಿಯಲ್ಲಿ ಎಸ್.ಎಸ್.ಎಫ್.ಉಪ್ಪಿನಂಗಡಿ ಉಪಾಧ್ಯಕ್ಷರಾದ ಬಹು ಮುಹಮ್ಮದ್ ಮಿಸ್ಬಾಹಿ ವಳಾಲು ರವರು ವಿದ್ಯಾರ್ಜನೆಯ ಮಹತ್ವ ಎಂಬ ವಿಷಯದ ಕುರಿತು ತರಗತಿ ನಡೆಸಿದರು.ತದನಂತರ ನಡೆದ ಕೊಲೋಕಿಯಂ ಕ್ಯಾಂಪಸ್ ಕಾರ್ಯಾಗಾರದಲ್ಲಿ ಖ್ಯಾತ ಮೋಟಿವೇಶನ್ ತರಬೇತುದಾರರಾದ ಬಹು ಹಾಫಿಳ್ ಅನಸ್ ಅಹ್ಸನಿ, ನೆಲ್ಯಾಡಿರವರು ಮೋಟಿವೇಶನ್ ತರಗತಿ ನಡೆಸಿದರು.ನಾಲ್ಕನೆಯ ಅವಧಿಯಲ್ಲಿ ಎಸ್.ಎಸ್.ಎಫ್.ಉಪ್ಪಿನಂಗಡಿ ಡಿವಿಶನ್ ಕಾರ್ಯದರ್ಶಿಗಳಾದ ಬಹು ಅಬ್ದುಲ್ ರಹ್ಮಾನ್ ಪದ್ಮುಂಜ ರವರು ಎಸ್.ಎಸ್.ಎಫ್.ಮೆನಿಫೆಸ್ಟೋ ಎಂಬ ವಿಷಯದ ಬಗ್ಗೆ ತರಗತಿ.ನಡೆಸಿದರು.

ಕಾರ್ಯಕ್ರಮದಲ್ಲಿ ಎಸ್.ಎಸ್.ಎಫ್.ಉಪ್ಪಿನಂಗಡಿ ಡಿವಿಶನ್ ಪದಾಧಿಕಾರಿಗಳು,ಎಸ್.ಎಸ್.ಎಫ್. ಕುಪ್ಪೆಟ್ಟಿ ಸೆಕ್ಟರ್ ಅಧ್ಯಕ್ಷರಾದ ಬಹು ಮುಸ್ತಫಾ ಮದನಿ ಕುಪ್ಪೆಟ್ಟಿ, ಕ್ಯಾಂಪಸ್ ಕಾರ್ಯದರ್ಶಿ ಅನ್ವರ್ ಜಮಾಲ್ ಕುಪ್ಪೆಟ್ಟಿ, ವಿವಿಧ ಸೆಕ್ಟರ್ ಗಳ ನಾಯಕರು ಉಪಸ್ಥಿತರಿದ್ದು ಸಹಕರಿಸಿದರು.ಕಾರ್ಯಕ್ರಮದಲ್ಲಿ ವಿವಿಧ ಭಾಗಗಳಿಂದ ಸುಮಾರು ಐವತ್ತು ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಮಾಡಿಕೊಂಡರು.ಕಾರ್ಯಕ್ರಮದಲ್ಲಿ ಎಸ್.ಎಸ್.ಎಫ್.ಉಪ್ಪಿನಂಗಡಿ ಡಿವಿಶನ್ ಕಾರ್ಯದರ್ಶಿ ಬಹು ಶರೀಫ್ ಸಖಾಫಿ ಮೂರುಗೋಳಿ ಸ್ವಾಗತಿಸಿದರು ಹಾಗೂ ಡಿವಿಶನ್ ಪದಾಧಿಕಾರಿಗಳಾದ ಬಹು ರಫೀಕ್ ಝೈನಿ ಉರುವಾಲು ಪದವು ವಂದಿಸಿದರು.ಕಾರ್ಯಕ್ರಮದ ಕೊನೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ವಿವಿಧ ಸ್ಕಾಲರ್ಶಿಪ್ ಗಳಿಗೆ ಮಾಹಿತಿಯನ್ನೊಳಗೊಂಡ ಕರಪತ್ರವನ್ನು ಉಚಿತವಾಗಿ ನೀಡಲಾಯಿತು.

error: Content is protected !! Not allowed copy content from janadhvani.com