ವಿರಾಜಪೇಟೆ: ಸಮಸ್ತ ಕೇರಳ ಸುನ್ನಿ ಜಂಇಯ್ಯತುಲ್ ಉಲಮಾ ಅಧ್ಯಕ್ಷರಾದ ಶೈಖುನಾ ರಈಸುಲ್ ಉಲಮಾ ಸುಲೈಮಾನ್ ಉಸ್ತಾದ್ ಕೊಡಗು ಜಿಲ್ಲೆಯ ಪ್ರಪ್ರಥಮ ಸಮನ್ವಯ ವಿದ್ಯಾ ಕೇಂದ್ರ ಅನ್ವಾರುಲ್ ಹುದಾ ಸೆಂಟರ್‌ಗೆ ಸಂದರ್ಶನ ನೀಡಿ ವಿಶ್ವ ವಿಖ್ಯಾತ ಹದೀಸ್ ಗ್ರಂಥವಾದ ಸ್ವಹೀಹುಲ್ ಬುಖಾರಿ ತರಗತಿ ನಡೆಸಿದರು.
ಕಾರ್ಯಕ್ರಮದಲ್ಲಿ ಜಾಮಿಅ ಇಹ್ಯಾಉಸ್ಸುನ್ನ ಅರೆಬಿಕ್ ಕಾಲೇಜಿನ ಮುದರ್ರಿಸರಾದ ಶೈಖುನಾ ಅಬ್ದುಲ್ಲಾ ಅಹ್ಸನಿ ಇಲ್ಮಿನ ಮಹತ್ವದ ಕುರಿತು ಹಿತ ವಚನ ನುಡಿದರು.
ಅನ್ವಾರುಲ್ ಹುದಾದ ಸಂತತಿ ಮುಹಮ್ಮದ್ ಶಾಫಿ ಅನ್ವಾರಿ ಅಸ್ಸಖಾಫಿ ವಿರಚಿತ ‘ನಿಮ್ಮ ಮಕ್ಕಳು’ ಎಂಬ ಕೃತಿಯನ್ನು ಶೈಖುನಾ ರಈಸುಲ್ ಉಲಮಾರ ಪವಿತ್ರ ಹಸ್ತದಿಂದ ಬಿಡುಗಡೆ ಮಾಡಿದರು.
ಅನ್ವಾರುಲ್ ಹುದಾ ಸಂಸ್ಥೆಯ ವತಿಯಿಂದ ಶೈಖುನಾ ರಈಸುಲ್ ಉಲಮಾರವರಿಗೆ ಕೊಡಗಿನ ಧಾನ್ಯಗಳನ್ನು ನೀಡಿ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಹಾಫಿಳ್ ಮಜೀದ್ ಅಹ್ಸನಿ, ಸಂಸ್ಥೆಯ ಸಾರಥಿ ಅಶ್ರಫ್ ಅಹ್ಸನಿ, ಇಸ್ಮಾಯಿಲ್ ಸಖಾಫಿ, ರಶೀದ್ ಸಅದಿ, ಅಬ್ದುರ್ರಹ್ಮಾನ್ ಅಹ್ಸನಿ, ಶಫೀಕ್ ಸಖಾಫಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.