ದೇಶ ವ್ಯಾಪಿ ಇವಿಎಂ ದೋಷ- ಸುಪ್ರೀಂ ಮೆಟ್ಟಲೇರಲಿದೆ ವಿಪಕ್ಷ

ನವದೆಹಲಿ, ಏ.24- ಮತಯಂತ್ರಗಳಲ್ಲಿನ ದೋಷ ಕುರಿತಂತೆ, ಆರೋಪ ಮಾಡಿರುವ ಪ್ರತಿ ಪಕ್ಷಗಳು, ಮೂರನೇ ಹಂತದ ಚುನಾವಣೆ ನಂತರ, ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದೆ.

ಮೂರನೇ ಹಂತದ ಲೋಕಸಭೆ ಚುನಾವಣೆ ಏಪ್ರಿಲ್ 23 ರಂದು ಪೂರ್ಣಗೊಂಡಿದೆ, ಒಟ್ಟು 15 ರಾಜ್ಯಗಳ 117 ಕ್ಷೇತ್ರಗಳಲ್ಲಿ ಚುನಾವಣೆ ಪೂರ್ಣಗೊಂಡಿದೆ. ಆದರೆ ಹಲವು ಕ್ಷೇತ್ರಗಳಲ್ಲಿ ಇವಿಎಂ ಮತ್ತು ವಿವಿ ಪ್ಯಾಟ್‌ಗಳು ದೋಷಪೂರಿತವಾಗಿದ್ದವು ಇನ್ನು ಕೆಲವು ಕಡೆ ಯಾವುದೇ ಬಟನ್ ಒತ್ತಿದರೂ ಮತ ಬಿಜೆಪಿ ಗೆ ಹೋಗುತ್ತಿದ್ದವು. ಮತಯಂತ್ರಗಳ ಈ ದೋಷ ಕುರಿತಂತೆ, ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಅಭಿಪ್ರಾಯವನ್ನು ಹೊರಹಾಕಿದೆ.

ವಿರೋಧ ಪಕ್ಷಗಳು, ಪ್ರತಿ ಕ್ಷೇತ್ರದ ಕನಿಷ್ಟ 50 ವಿವಿ ಪ್ಯಾಟ್‌ಗಳನ್ನು ಪರಿಶೀಲಿಸಿದ ನಂತರ, ಮತದಾನಕ್ಕೆ ಅವಕಾಶ ಕಲ್ಪಿಸಬೇಕೆಂದು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಲಿದ್ದೇವೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ.

ಈ ಕುರಿತು ಕಾಂಗ್ರೆಸ್ ಎನ್.ಸಿ.ಪಿ, ಟಿಡಿಪಿ, ಟಿಎಂಸಿ, ಎ‌ಎಪಿ, ಸಿಪಿಐ(ಎಂ), ಸಿಪಿಐ, ಡಿಎಂಕೆ ಪಕ್ಷಗಳು ಜಂಟಿಯಾಗಿ ಪತ್ರಿಕಾಗೋಷ್ಠಿ ನಡೆಸಿ, ಮತಯಂತ್ರಗಳ ದೋಷ ಕುರಿತಂತೆ, ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದಾಗಿ ತಿಳಿಸಿವೆ.

ಕಳೆದ ವಿಧಾನಸಭೆ ಚುನಾವಣೆಯನ್ನು ಮತಯಂತ್ರಗಳ ದೋಷ ಕುರಿತಂತೆ, ವಿಚಾರಣೆ ನಡೆಸಲು ವಿರೋಧ ಪಕ್ಷಗಳು, ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದವು ಮತ್ತು ಇವಿಎಂ ಯಂತ್ರಗಳನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದವು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಇವಿಎಂ ದುರುಪಯೋಗ ಸಾಧ್ಯವಿಲ್ಲ ಎಂದು ಹೇಳಿತ್ತು.

Leave a Reply

Your email address will not be published. Required fields are marked *

error: Content is protected !!