ದಫನಗೈದು ಒಂಬತ್ತು ದಿನಗಳ ಬಳಿಕ ಮರು ಜೀವ ಪಡೆದ ಅದ್ಭುತ ಘಟನೆ!

ಪ್ರಸಿದ್ಧ ಅರಬ್ ನ್ಯೂಸ್ ಪೋರ್ಟಲ್ ಆದ ‘ಅಲ್ ಯೌಮ್24’ ನಲ್ಲಿ ಇತ್ತೀಚೆಗೆ ಅವಿಶ್ವಸನೀಯವಾದ ಒಂದು ಅಧ್ಬುತ ಪ್ರಕರಣದ ಬಗ್ಗೆ ವರದಿ ಪ್ರಕಟಗೊಂಡಿತ್ತು.

ಮರಣಹೊಂದಿರುವುದಾಗಿ ವೈದ್ಯರು ಬರೆದಿಟ್ಟ ಮೊರಾಕೋದ ಯುವತಿಯನ್ನು ದಫನ ಮಾಡಿ ಒಂಬತ್ತು ದಿನಗಳ ಬಳಿಕ ಮರಳಿ ಜೀವ ಪಡೆದ ಕುತೂಹಲಕಾರಿ ಘಟನೆ ಬಗ್ಗೆ ಆ ವರದಿಯಲ್ಲಿ ವಿಶ್ಲೇಷಿಸಲಾಗಿತ್ತು.

ಕೆಲವು ದಿನಗಳ ಹಿಂದೆ ಆ ಯುವತಿಯ ಆಪರೇಷನ್ ಕಳೆದಿತ್ತು. ಬಳಿಕ ಎರಡು ದಿನಗಳು ಆಕೆಯನ್ನು ನಿರೀಕ್ಷೆಗೊಳಪಡಿಸಿ ನಂತರ ಆಕೆ ಮರಣಹೊಂದಿರುವುದಾಗಿ ಮನೆಮಂದಿಗೆ ತಿಳಿಸಿ, ಮರಣ ಸರ್ಟಿಫಿಕೇಟನ್ನೂ ನೀಡಿದ್ದರು. ಆ ಬಳಿಕ ವಿಧಿವಿಧಾನಗಳ ನಂತರ ನಗರದ ಖಬರ್ಸ್ಥಾನದಲ್ಲಿ ದಫನ ಮಾಡಲಾಗಿತ್ತು.

ಆದರೆ, ಇತ್ತೀಚೆಗೆ (ಏ.17)ಯುವಕರ ತಂಡವೊಂದು ಖಬರ್ಸ್ಥಾನದ ಹತ್ತಿರದಿಂದ ದಾಟುತ್ತಿದ್ದಾಗ ಗೋರಿಯ ಒಳಗಿನಿಂದ ಯುವತಿಯೊಬ್ಬಳ ನರಳಾಟ ಮತ್ತು ಅಳುವುದನ್ನು ಕೇಳಿಸಿಕೊಂಡರು. ತಕ್ಷಣ ಅವರು ಪೊಲೀಸರಿಗೆ ಕರೆಮಾಡಿ ನಂತರ ಗೋರಿಯನ್ನು ತೆರವುಗೊಳಿಸಿದರು.

https://youtu.be/YauYxqXw3EI

https://youtu.be/6AnAmfbMpd8

ಯುವತಿಗೆ ಜೀವ ಇರುವುದಾಗಿ ತಿಳಿದು ಬಂದ ನಂತರ ಜನರು ಕಿಕ್ಕಿರಿದು ಸೇರತೊಡಗಿದರು. ಸಂತೋಷ ತಾಳಲಾರದೆ ಜನಸ್ತೋಮವು ತಕ್ಬೀರ್ ಮೊಲಗಿಸುವ ವೀಡಿಯೋ ಕಾಣಬಹುದಾಗಿದೆ.

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com
error: Content is protected !!