ಕುವೈತ್ ಸಿಟಿ: ವಿದೇಶಿಗಳು ಕುವೈತ್ನಿಂದ ಊರಿಗೆ ಕಳುಹಿಸುವ ಹಣಕ್ಕೆ ತೆರಿಗೆ ವಸೂಲಿ ಮಾಡಬೆಕೆನ್ನುವ ನಿರ್ದೇಶನಕ್ಕೆ ಸಂಸತ್ತಿನ ಆರ್ಥಿಕ ಖಾತೆಯ ಸಮಿತಿಯು ಅಂಗೀಕಾರ ನೀಡಿದೆ. ಐದು ಶೇಕಡಾ ತೆರಿಗೆ ವಸೂಲಿ ಮಾಡುವಂತೆ ಅದು ಶಿಫಾರಸ್ಸು ಮಾಡಿದ್ದು, ಕಾನೂನು ಜಾರಿಗೆ ಬಂದರೆ ಭಾರತೀಯರು ಸೇರಿದಂತೆ ಅನಿವಾಸಿಗಳಿಗೆ ಅದು ಹೆಚ್ಚಿನ ಹೊರೆಯಾಗಿ ಪರಿಣಮಿಸಲಿದೆ.
ಸಮಿತಿಯ ತೀರ್ಮಾನವನ್ನು ಸಂಸತ್ತಿನ ಅನುಮೋದನೆಗಾಗಿ ಕಳುಹಿಸಲಾಗುತ್ತಿದ್ದು, ತೆರಿಗೆ ವಸೂಲಿ ಬಗ್ಗೆ ಈ ಹಿಂದೆ ಸರಕಾರ ಮತ್ತು ಸಂಸತ್ತಿನ ಕಾನೂನು ನಿರ್ಮಾಣ ಸಮಿತಿಯು ವಿರೋಧಿಸಿದ್ದವು.
ಆರ್ಥಿಕ ವ್ಯವಸ್ಥೆ ಗೆ ಅದು ಹೊರೆಯಾಗಲಿದೆ ಎನ್ನುವ ದಿಸೆಯಲ್ಲಿ ಆ ನಿರ್ದೇಶನವನ್ನು ಸರಕಾರ ವಿರೋಧಿಸಿದ್ದವು. ಆದರೆ ಸುಂಕ ವಸೂಲಿಯು ಸಂವಿಧಾನಕ್ಕೆ ವಿರೋಧವಲ್ಲ ಎಂಬುದು ಅರ್ಥಿಕ ಖಾತೆ ಸಮಿತಿಯ ಅಭಿಪ್ರಾಯವಾಗಿದೆ.
ಸರಕಾರವು ಸಂಸತ್ ನಲ್ಲಿ ಈ ನಿರ್ದೇಶನವನ್ನು ವಿರೋಧಿಸಲಿದೆ ಎನ್ನುವುದು ಅನಿವಾಸಿಗಳ ನಿರೀಕ್ಷೆಯಾಗಿದೆ. ಕುವೈತ್ನ ಸಂಖ್ಯೆಯಲ್ಲಿ ಶೇಕಡಾ 70ರಷ್ಟು ಅನಿವಾಸಿಗಳಿದ್ದಾರೆ ಎನ್ನಲಾಗಿದೆ.