ನೋಟ್ ಅಮಾನ್ಯ ಬಳಿಕ 50 ಲಕ್ಷ ಮಂದಿಗೆ ಉದ್ಯೋಗ ನಷ್ಟ-ಅಧ್ಯಯನ ವರದಿ

ಬೆಂಗಳೂರು(ಏ. 16): ನೋಟ್ ಬ್ಯಾನ್ ಕ್ರಮದಿಂದ ಇಡೀ ಅರ್ಥವ್ಯವಸ್ಥೆಯೇ ಹದಗೆಟ್ಟಿದೆ. ದೇಶದ ಉದ್ದಿಮೆಗೆ ತೀವ್ರ ಪೆಟ್ಟುಬಿದ್ದಿದೆ. ಲಕ್ಷಾಂತರ ಮಂದಿ ಕೆಲಸ ಕಳೆದುಕೊಂಡಿದ್ದಾರೆ ಎಂದು ಖಾಸಗಿ ಸಂಸ್ಥೆಯ ಅಧ್ಯಯನ ವರದಿಯೊಂದು ತಿಳಿಸಿದೆ.

ಅಜೀಮ್ ಪ್ರೇಮ್ಜೀ ವಿಶ್ವವಿದ್ಯಾಲಯದ ವರದಿಯೊಂದರ ಪ್ರಕಾರ ಡೀಮಾನಿಟೈಸೇಶನ್ ಆದ ನಂತರ ದೇಶದಲ್ಲಿ 50 ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದಾರಂತೆ. 2016ರ ನಂತರ ದೇಶದಲ್ಲಿ ನಿರುದ್ಯೋಗ ಪ್ರಮಾಣದಲ್ಲಿ ತೀವ್ರ ಹೆಚ್ಚಳವಾಗಿದೆ ಎಂದು “ಸ್ಟೇಟ್ ಆಫ್ ವರ್ಕಿಂಗ್ ಇಂಡಿಯಾ 2019” ವರದಿಯಲ್ಲಿ ತಿಳಿಸಲಾಗಿದೆ.
ಕಳೆದ ಒಂದು ದಶಕದಿಂದಲೂ ದೇಶದಲ್ಲಿ ನಿರುದ್ಯೋಗ ಪ್ರಮಾಣ ನಿರಂತರವಾಗಿ ಏರಿಕೆಯಾಗುತ್ತಲೇ ಇದೆ. ಆದರೆ, 2016ರ ನಂತರ ನಿರುದ್ಯೋಗ ಪ್ರಮಾಣ ಉಚ್ಛ್ರಾಯ ಮಟ್ಟ ತಲುಪಿತು ಎಂದು ಈ ವರದಿ ಹೇಳುತ್ತಿದೆ. ಇದರ ಪ್ರಕಾರ, 20-24 ವಯೋಮಾನದ ಯುವಸಮುದಾಯದವರ ಉದ್ಯೋಗಕ್ಕೇ ಅತಿ ಹೆಚ್ಚು ಕುತ್ತು ಬಂದಿದೆ.

ನಗರ, ಗ್ರಾಮೀಣ ಎರಡೂ ಭಾಗದವರೂ ನಿರುದ್ಯೋಗದ ಬಿಸಿ ಅನುಭವಿಸಿದ್ದಾರೆನ್ನಲಾಗಿದೆ. ಉದ್ಯೋಗ ವಿಚಾರದಲ್ಲಿ ಸದಾ ಹಿನ್ನಡೆಯಲ್ಲಿರುವ ಮಹಿಳೆಯರಿಗೆ 2016ರ ನಂತರ ಅತೀ ಹೆಚ್ಚು ಸಂಕಷ್ಟದ ಪರಿಸ್ಥಿತಿ ಎದುರಾಗಿದೆ. ಹಾಗೆಯೇ, ಸುಶಿಕ್ಷಿತರ ನಿರುದ್ಯೋಗದಲ್ಲೂ ಭಾರೀ ಏರಿಕೆಯಾಗಿದೆ ಎಂದು ಈ ವರದಿ ಹೇಳುತ್ತಿದೆ.

Leave a Reply

Your email address will not be published. Required fields are marked *

error: Content is protected !!