janadhvani

Kannada Online News Paper

ಈ ವರದಿಯ ಧ್ವನಿಯನ್ನು ಆಲಿಸಿ


ನವದೆಹಲಿ: ಕಳೆದ ಮೂರು ತಿಂಗಳ ಕಾಲ ಸಂಬಳ ನೀಡದ ಕಾರಣದಿಂದಾಗಿ ಜೆಟ್ ಏರ್ವೇಸ್ ನ ಸಾವಿರಕ್ಕೂ ಅಧಿಕ ಪೈಲಟ್ಗಳು ಸೋಮವಾರದಿಂದ ವಿಮಾನ ಚಾಲನೆಯನ್ನು ಬಹಿಷ್ಕರಿಸಲು ಮುಂದಾಗಿದ್ದಾರೆ ಎಂದು ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಅಧ್ಯಕ್ಷರು ತಿಳಿಸಿದ್ದಾರೆ.

1.2 ಶತಕೋಟಿ ಡಾಲರ್ ಗಿಂತಲೂ ಹೆಚ್ಚಿನ ಬ್ಯಾಂಕ್ ಸಾಲವನ್ನು ಹೊಂದಿರುವ ಈ ವಿಮಾನಯಾನ ಸಂಸ್ಥೆಯು ಈಗ ಟೀಕೆಗೊಳಗಾಗುತ್ತಿದೆ ಮತ್ತು ಮಾರ್ಚ್ ಅಂತ್ಯದಲ್ಲಿನ ಒಪ್ಪಂದದ ಭಾಗವಾಗಿ ತನ್ನ ಸಾಲದಾತರಿಂದ ಸುಮಾರು $ 217 ದಶಲಕ್ಷ ಸಾಲವನ್ನು ಪಡೆಯಬೇಕಾಗಿದೆ.ಈಗ ಈ ಕುರಿತಾಗಿ ರಾಯಿಟರ್ಸ್ ಗೆ ಪ್ರತಿಕ್ರಿಯಿಸಿರುವ ಕ್ಯಾಪ್ಟನ್ ಕರಣ್ ಚೋಪ್ರಾ ಕಳೆದ ಮೂರು ತಿಂಗಳಿಂದ ಪೈಲೆಟ್ಸ್ ಗಳಿಗೆ ವೇತನವನ್ನು ಪಾವತಿಸಿಲ್ಲವೆಂದು ಹೇಳಿದ್ದಾರೆ.

ಇತ್ತೀಚಿನ ಕೆಲವು ವಾರಗಳಲ್ಲಿ ಗುತ್ತಿಗೆದಾರರು ವಿಮಾನಗಳ ನೋಂದಣಿಯಿಂದ ಅಮಾನ್ಯ ಮಾಡಿಸುತ್ತಿದ್ದಾರೆ.ಈ ಹಿನ್ನಲೆಯಲ್ಲಿ ಈಗ ಜೆಟ್ ಏರ್ವೇಸ್ ನಲ್ಲಿ ಬಿಕ್ಕಟ್ಟು ತೀವ್ರಗೊಂಡಿದೆ ಎನ್ನಲಾಗಿದೆ. ಈಗಾಗಲೇ ಜೆಟ್ ಪರಿಸ್ಥಿತಿ ವಿಚಾರವಾಗಿ ಶುಕ್ರವಾರದಂದು ಪ್ರಧಾನಿ ಕಚೇರಿಯಲ್ಲಿ ತುರ್ತು ಸಭೆ ನಡೆದಿದ್ದು ಈ ಸಭೆಯಲ್ಲಿ ವಾಯುಯಾನ ಕಾರ್ಯದರ್ಶಿ ಪ್ರದೀಪ್ ಸಿಂಗ್ ಖರೋಲಾ ಕೂಡಾ ಭಾಗವಹಿಸಿದ್ದರು ಎನ್ನಲಾಗಿದೆ.

ಸಭೆಯ ನಂತರ ಮಾತನಾಡಿದ ಖರೋಲಾ ವಾರಾಂತ್ಯದಲ್ಲಿ 6-7 ವಿಮಾನಗಳು ಕಾರ್ಯ ನಿರ್ವಹಿಸಲು ಕ್ಯಾರಿಯರ್ಗೆ ಹಣವಿದೆ ಮತ್ತು ನಂತರ ಸೋಮವಾರ ಮಧ್ಯಾಹ್ನ ನಂತರ ಎಷ್ಟು ಜೆಟ್ಗಳು ಹಾರಾಡಬಹುದೆಂದು ಸಾಲದಾತರು ನಿರ್ಧರಿಸಬೇಕಾಗುತ್ತದೆ ಹೇಳಿದ್ದರು.ಈಗ ಸೋಮವಾರದಂದು ಮಧ್ಯಂತರದಲ್ಲಿ ಹಣಕ್ಕಾಗಿ ಕಂಪನಿಯು ಸೋಮವಾರ ಬ್ಯಾಂಕರ್ಗಳನ್ನು ಭೇಟಿ ಮಾಡಲಿದೆ ಎಂದು ಟಿವಿ ಚಾನಲ್ ವೊಂದು ತಿಳಿಸಿದೆ.

error: Content is protected !! Not allowed copy content from janadhvani.com