ರಿಯಾದ್: ಸೌದಿ ಅರೇಬಿಯಾದ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಮಸೀದಿಗಳಲ್ಲಿ ನಡೆಯಲಿರುವ ಕಾನೂನು ಉಲ್ಲಂಘನೆಗಳನ್ನು ನಿರ್ಣಯಿಸಿ ಪಟ್ಟಿ ಮಾಡಲಾಗಿದೆ. ಹೊಸ ನಿಬಂಧನೆಗಳಾನುಸಾರ ಉಲ್ಲಂಘನೆಗೆ ದಂಡ, ಸೆರೆವಾಸ ನೀಡುವ ಕಾನೂನಿಗೆ ಸಚಿವಾಲಯ ಅನುಮೋದನೆ ನೀಡಿದೆ.
ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ 17 ಉಲ್ಲಂಘನೆಗಳು ಮತ್ತು ಮಸೀದಿಗಳಲ್ಲಿ ನಡೆಯುವ ಆರು ಕಾನೂನು ಉಲ್ಲಂಘನೆಗಳ ಪಟ್ಟಿಯನ್ನು ಸಚಿವಾಲಯ ಬಿಡುಗಡೆ ಮಾಡಿದೆ.
ರಸ್ತೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕಸ ಬಿಸಾಡುವುದು, ಅನುಮತಿ ಪಡೆಯದೆ ನೋಟೀಸು ಪ್ರಕಟಿಸುವುದು,ಹಂಚುವುದು, ಅದನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸುವುದು.
ಪೂರ್ವಾನುಮತಿ ಇಲ್ಲದೆ ರಹಸ್ಯ ಕ್ಯಾಮೆರಾಗಳನ್ನು ಬಳಸಿ ಸರ್ವಜನಿಕ ಸ್ಥಳಗಳಲ್ಲಿ ಫೋಟೋಗಳು ಮತ್ತು ವೀಡಿಯೊಗಳನ್ನು ತೆಗೆಯುವುದು.
ಅನುಮತಿ ಪಡೆಯದೆ ಕ್ಯಾಂಪ್ಗಳನ್ನು ನಡೆಸುವುದು, ಸಂಘಟಿತರಾಗುವುದು, ಕಾರ್ಯಕ್ರಮ ನಡೆಸುವುದು.
ಅನುಚಿತ ವಸ್ತ್ರಧಾರಣೆ ಮಾಡಿ ಸಾರ್ವಜನಿಕ ಸ್ಥಳಗಳಲ್ಲಿ ನಡೆದಾಡುವುದು.
ವಾಹನಗಳು, ಪೀಠೋಪಕರಣ, ಕಸವನ್ನು ಸಾರ್ವಜನಿಕ ಸ್ಥಳಗಳಲ್ಲಿ ನಿಕ್ಷೇಪಿಸಿ ವಿಕೃತಗೊಳಿಸುವುದು ಮುಂತಾದವುಗಳನ್ನು ಸಾರ್ವಜನಿಕ ಸ್ಥಳಗಳಲ್ಲಿನ ಕಾನೂನು ಉಲ್ಲಂಘನೆಯಲ್ಲಿ ಪರಿಗಣಿಸಲಾಗುವುದು.
ಮಸೀದಿಗಳನ್ನು ಕೇಂದ್ರೀಕರಿಸಿ ಭಿಕ್ಷೆ ಬೇಡುವುದು, ಹಣ ಸಂಗ್ರಹಿಸುವುದು, ಜಾಹೀರಾತು ವಿತರಿಸುವುದು, ಶೌಚಾಲಯಗಳನ್ನು ಗಲೀಜು ಮಾಡುವುದು ಮತ್ತು ಅದರ ದುರುಪಯೋಗ ಇವುಗಳನ್ನು ಮಸೀದಿಯಲ್ಲಿನ ಕಾನೂನು ಉಲ್ಲಂಘನೆ ವಿಭಾಗದಲ್ಲಿ ಪರಿಗಣಿಸಲಾಗುವುದು. ಹೊಸ ಕಾನೂನಿನ ಪ್ರಕಾರ, ಈ ಕಾನೂನುಗಳನ್ನು ಉಲ್ಲಂಘಿಸಿದರೆ ಸೆರೆವಾಸ ಮತ್ತು ದಂಡ ವಿಧಿಸಲಾಗುತ್ತದೆ.















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು