janadhvani

Kannada Online News Paper

ಯುಎಇ: ಕುಟುಂಬ ವೀಸಾ ಅನುಮತಿಸಲು ಹೊಸ ನಿಯಮ

ದುಬೈ: ಯುಎಇನಲ್ಲಿ ಕುಟುಂಬ ವೀಸಾಗಳನ್ನು ನೀಡಲು ಆದಾಯವನ್ನು ಮಾತ್ರ ಪರಿಗಣಿಸಲು ತೀರ್ಮಾನಿಸಲಾಗಿದೆ. ಈ ಹಿಂದೆ ಕುಟುಂಬ ವಿಸಾಗಳಿಗೆ ಪ್ರಾಯೋಜಕತ್ವ ನೀಡಲು ವೃತ್ತಿ ಮತ್ತು ಆದಾಯವನ್ನು ಪರಿಗಣಿಸಲಾಗುತ್ತಿದ್ದವು. ಆದಾಗ್ಯೂ, ಆದಾಯ ಎಷ್ಟಿರಬೇಕು ಎನ್ನುವ ಬಗ್ಗೆ ಸೂಚಿಸಲಾಗಿಲ್ಲ.

ವಿದೇಶಿಗಳು ತಮ್ಮ ಕುಟುಂಬದ ಪ್ರಾಯೋಜಕತ್ವವನ್ನು ವಸಿಸಲು ಆದಾಯ ಆಧಾರಿತ ಕಾನೂನು ತಿದ್ದುಪಡಿಯನ್ನು ಯುಎಇ ಕ್ಯಾಬಿನೆಟ್ ಅನುಮೋದಿಸಿದ್ದು, ಇದು ಅಂತರರಾಷ್ಟ್ರೀಯ ಮಟ್ಟದಲ್ಲಿನ ಬದಲಾವಣೆ ಎಂದು ಕ್ಯಾಬಿನೆಟ್‌ನ ಜನರಲ್ ಸೆಕ್ರೆಟರಿಯೇಟ್ ತಿಳಿಸಿದೆ. ಆದರೆ ಆದಾಯದ ಮೊತ್ತದ ಬಗ್ಗೆ ಸ್ಪಷ್ಟವಾಗಿಲ್ಲ.

ಈ ಹಿಂದೆ ಪ್ರಾಯೋಜಕರು ಕುಟುಂಬ ವಿಸಾ ಪಡೆಯಲು 4,000 ದಿರ್ಹಂ ಸಂಬಳ ಅಥವಾ 3,000 ದಿರ್ಹಮ್ ಸಂಬಳದ ಜೊತೆಗೆ ವಾಸ ಸ್ಥಳವನ್ನು ಹೊಂದಿರಬೇಕಾಗಿತ್ತು.
ಈ ಹಿಂದೆ ಮಕ್ಕಳ ಪ್ರಾಯೋಜಕತ್ವಕ್ಕಾಗಿ ಮಹಿಳೆಯರು 10,000 ದಿರ್ಹಂ ಸಂಬಳ ಪಡೆಯುವವರಾಗಿಬೇಕಿತ್ತು. ಆದರೆ ತಸ್ತಿಗೆಯನ್ನೂ ಪರಿಗಣಿಸಲ್ಪಡುತ್ತಿದ್ದವು. ಹೊಸ ನಿರ್ಧಾರವು ವಿದೇಶಿ ಕಾರ್ಮಿಕರ ಕುಟುಂಬದ ಸ್ಥಿರತೆ ಮತ್ತು ಸಾಮಾಜಿಕ ಒಗ್ಗೂಡಿಕೆಯನ್ನು ಬಲಪಡಿಸಲಿದೆ ಎಂದು ಸಚಿವಾಲಯ ಹೇಳಿದೆ.

error: Content is protected !! Not allowed copy content from janadhvani.com