janadhvani

Kannada Online News Paper

ದುಬೈ: ಖುರ್‌ಆನ್‌ನಲ್ಲಿ ಉಲ್ಲೇಖಿಸಲ್ಪಟ್ಟಿರುವ ಸಸ್ಯವರ್ಗವನ್ನು ನೆಟ್ಟು ದುಬೈ ಪುರಸಭೆ ನಿರ್ಮಿಸಿದ ಖುರ್‌ಆನ್ ಉದ್ಯಾನವನ್ನು ಸಾರ್ವಜನಿಕರಿಗೆ ತೆರೆಯಲ್ಪಟ್ಟಿದ್ದು, ಪ್ರವೇಶ ಉಚಿತವಾಗಿದೆ.

ಇಸ್ಲಾಂ ಧರ್ಮವನ್ನು ವಿವಿಧ ಧರ್ಮಗಳಿಗೆ ಮತ್ತು ದೇಶಗಳಿಗೆ ಪರಿಚಯಿಸುವ, ಪರಿಸರ, ಸಸ್ಯಶಾಸ್ತ್ರ, ಸಂಸ್ಕೃತಿಗೆ ಇಸ್ಲಾಂ ನೀಡಿದ ಕೊಡುಗೆಗಳನ್ನು ವಿವರಿಸುವ ಸಲುವಾಗಿ ಖುರ್‌ಆನ್ ಪಾರ್ಕ್ ಅನ್ನು ಪ್ರಸ್ತುತಗೊಳಿಸಲಾಗಿದೆ.

60 ಹೆಕ್ಟೇರ್ ನಷ್ಟಿರುವ ಉದ್ಯಾನದಲ್ಲಿ ಇಸ್ಲಾಮಿಕ್ ಗಾರ್ಡನ್ ಜೊತೆಗೆ, ಖುರ್‌ಆನ್ ಅದ್ಭುತಗಳನ್ನು ವಿವರಿಸುವ ಪ್ರದೇಶಗಳಿದೆ.

ಉಲ್ಲಾಸಕ್ಕಾಗಿ ಆಗಮಿಸುವ ಹಿರಿಯರು ಮತ್ತು ಮಕ್ಕಳಿಗಾಗಿ ಆಟದ ಸ್ಥಳ ಓಪನ್ ಥಿಯೇಟರ್, ಲೇಕ್, ಓಟದ ಟ್ರ್ಯಾಕ್‌ಗಳನ್ನು ಪಾರ್ಕ್ ಒಳಗೊಂಡಿದೆ. ಈ ಉದ್ಯಾನದಲ್ಲಿ ಖುರ್‌ಆನ್‌ನಲ್ಲಿ ವಿವರಿಸಲಾದ ದಾಳಿಂಬೆ, ಒಲಿವ್ ಸೇರಿದಂತೆ 54 ಜಾತಿಯ ಸಸ್ಯಗಳನ್ನು ನೆಡಲಾಗಿದೆ.

error: Content is protected !! Not allowed copy content from janadhvani.com