ಶಾರ್ಜಾ: ಸುಪ್ರೀಂ ಕೌನ್ಸಿಲ್ನ ಸದಸ್ಯ ಮತ್ತು ಶಾರ್ಜಾದ ಆಡಳಿತಗಾರ ಶೈಖ್ ಡಾ. ಸುಲ್ತಾನ್ ಬಿನ್ ಮುಹಮ್ಮದ್ ಅಲ್ ಖಾಸಿಮಿ ಅವರ ನೇತೃತ್ವದಲ್ಲಿ ನಡೆದ ಶಾರ್ಜಾ ಇಂಟರ್‌ನ್ಯಾಷನಲ್ ಹದೀಸ್ ಹಿಫ್‌ಳ್ ಸ್ಪರ್ಧೆಯಲ್ಲಿ ಮರ್ಕಝ್ ವಿದ್ಯಾರ್ಥಿ ಹಾಫಿಝ್ ಉಬೈದ್ ಇಸ್ಮಾಯೀಲ್ ಪ್ರಥಮ ಸ್ಥಾನ ಗಳಿಸಿಕೊಂಡಿದ್ದಾರೆ.
40 ಕ್ಕೂ ಹೆಚ್ಚು ರಾಷ್ಟ್ರಗಳಿಂದ 396 ಸ್ಪರ್ಧಿಗಳು ಭಾಗವಹಿಸಿದ್ದು, ಇದರಲ್ಲಿ ಹದೀಸ್‌ನ ಸನದ್ ಮತ್ತು ಅರ್ಥವನ್ನು ಸ್ಪರ್ಧೆಗೆ ಪರಿಗಣಿಸಲಾಗಿತ್ತು. ಶಾರ್ಜಾದ ಉಪ ಆಡಳಿತಗಾರ ಮತ್ತು ಕ್ರೌನ್ ಪ್ರಿನ್ಸ್ ಶೈಖ್ ಸುಲ್ತಾನ್ ಬಿನ್ ಮುಹಮ್ಮದ್ ಬಿನ್ ಸುಲ್ತಾನ್ ಅಲ್ ಖಾಸಿಮಿ ಪ್ರಶಸ್ತಿಯನ್ನು ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ಶಾರ್ಜಾ ಖುರ್ಆನ್ ಸುನ್ನತ್ ಫೌಂಡೇಷನ್ ಸಾರಥಿ ಶೈಖ್ ಸುಲ್ತಾನ್ ಬಿನ್ ಮತರ್ ಬಿನ್ ರಾಮ್ಲೋಕ್ ಅಲ್ ಖಾಸಿಮಿ, ವಿಶ್ವವಿದ್ಯಾಲಯದ ಉಪ-ಕುಲಪತಿ ಡಾ. ರಶಾದ್ ಸಾಲಿಂ ಉಪಸ್ಥಿತರಿದ್ದರು.
ಕಾರಂದೂರ್ ಮರ್ಕಝ್‌ನಲ್ಲಿ ಹಾಫಿಳ್ ಮತ್ತು ಜೂನಿಯರ್ ಶರೀಅತ್ ಪಠಣವನ್ನು ಪೂರ್ಣಗೊಳಿಸಿದ ವಯನಾಡ್ ಕುಂಬಳಕ್ಕಾಡ್ ನಿವಾಸಿ ಇದೀಗ ಶಾರ್ಜಾದ ಅಲ್ ಖಾಸಿಮಿಯಾ ವಿಶ್ವವಿದ್ಯಾನಿಲಯದಲ್ಲಿ ಅರಬಿಕ್ ಸಾಹಿತ್ಯ ಬಗ್ಗೆ ಉನ್ನತ ಅಧ್ಯಯನ ಮಾಡುತ್ತಿರುವ ಉಬೈದ್. ಇಸ್ಮಾಯೀಲ್ ಮುಸ್ಲಿಯಾರ್, ರಂಲಾ ದಂಪತಿಯ ಪುತ್ರರಾಗಿದ್ದಾರೆ. ಸ್ಪರ್ಧೆಯಲ್ಲಿ ಪಾಲ್ಗೊಂಡ ಇತರ ಭಾರತೀಯ ವಿದ್ಯಾರ್ಥಿಗಳು ಕೂಡ ಗಮನಾರ್ಹ ಪ್ರದರ್ಶನ ನೀಡಿದ್ದಾರೆ ಎಂದು ಅಲ್ ಖಾಸಿಮಿಯಾ ವಿಶ್ವವಿದ್ಯಾಲಯದ ಭಾರತೀಯ ಸಂಯೋಜಕ ಡಾ.ನಾಸರ್ ವಾನಿಯಂಬಲಂ ಹೇಳಿದ್ದಾರೆ.