ನ್ಯೂಜಿಲ್ಯಾಂಡ್: ಎರಡು ಮಸೀದಿಗಳ ಮೇಲೆ ಗುಂಡಿನ ದಾಳಿ-40 ಮಂದಿ ಬಲಿ

ಕ್ರೈಸ್ಟ್ ಚರ್ಚ್: ನ್ಯೂಜಿಲ್ಯಾಂಡ್ ನ ಕ್ರೈಸ್ಟ್ ಚರ್ಚ್ ನಗರದ ಎರಡು ಮಸೀದಿಗಳ ಮೇಲೆ ದುಷ್ಕರ್ಮಿಗಳು ಶುಕ್ರವಾರ (ಸ್ಥಳೀಯ ಕಾಲಮಾನ ಪ್ರಕಾರ ಮಧ್ಯಾಹ್ನ) ಗುಂಡಿನ ದಾಳಿ ನಡೆಸಿದ್ದು 40 ಮಂದಿ ನಾಗರಿಕರು ಮರಣ ಹೊಂದಿದ್ದು, ಈ ಸಂದರ್ಭ ಮಸೀದಿಯಲ್ಲಿದ್ದ ಬಾಂಗ್ಲಾ ಕ್ರಿಕೆಟಿಗರು ಪಾರಾಗಿದ್ದಾರೆ.

ಕ್ರೈಸ್ಟ್ ಚರ್ಚ್ ನ ಎರಡೂ ಮಸೀದಿಗಳ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, 20ಕ್ಕೂ ಹೆಚ್ಚು ಜನ ಗಂಭೀರ ಗಾಯಗೊಂಡಿದ್ದಾರೆ. ಘಟನೆಯ ಬಳಿಕ ಪೊಲೀಸರು ಒಂದು ಮಹಿಳೆ ಸೇರಿದಂತೆ ನಾಲ್ಕು ಆರೋಪಿಗಳನ್ನು ಬಂಧಿಸಿದ್ದಾರೆ.

ಘಟನೆ ನಡೆದಾಗ ಬಾಂಗ್ಲಾದೇಶ ಕ್ರಿಕೆಟಿಗರು ಹೇಗ್ಲೇಯ್ ಪಾರ್ಕ್ ಮಸೀದಿಯಲ್ಲಿ ಪ್ರಾರ್ಥನೆ ಮಾಡುತ್ತಿದ್ದರು. ಮೂರನೇ ಟೆಸ್ಟ್ ಪಂದ್ಯಕ್ಕಾಗಿ ಬಾಂಗ್ಲಾ ಆಟಗಾರರು ಕ್ರೈಸ್ಟ್ ಚರ್ಚ್ ಗೆ ಆಗಮಿಸಿದ್ದರು. ಬಾಂಗ್ಲಾ ಆಟಗಾರ ತಮೀಮ್ ಇಕ್ಬಾಲ್ ಈ ಬಗ್ಗೆ ಟ್ವೀಟ್ ಮಾಡಿದ್ದು, ಈ ದಾಳಿಯಿಂದ ಬಾಂಗ್ಲಾ ತಂಡಕ್ಕೆ ಯಾವುದೇ ಹಾನಿಯಾಗಿಲ್ಲ. ತಂಡ ಸುರಕ್ಷಿತವಾಗಿದೆ. ಇದೊಂದು ಭಯಾನಕ ಅನುಭವ ಎಂದು ಬರೆದಿದ್ದಾರೆ.

ಮಸ್ಜಿದುನ್ನೂರ್

ನ್ಯೂಜಿಲ್ಯಾಂಡ್ ಪ್ರಧಾನ ಮಂತ್ರಿ ಜೆಸಿಂಡಾ ಆರ್ಡರ್ನ್ ದಾಳಿಯನ್ನು ಖಂಡಿಸಿದ್ದು,ಈ ಘಟನೆಯಲ್ಲಿ 10 ಮಂದಿ ಲಿನ್ವುಡ್ ಅವೆನ್ಯೂ ಮಸೀದಿ ಮತ್ತು 30 ಮಂದಿ ಹ್ಯಾಗ್ಲೆ ಪಾರ್ಕ್ ಬಳಿಯ ಡೀನ್ಸ್ ಏವ್ ಮಸೀದಿ ನಲ್ಲಿ ಕೊಲ್ಲಲ್ಪಟ್ಟರು. ನ್ಯೂಜಿಲ್ಯಾಂಡ್ ಗೆ ಇದು ಒಂದು ಕರಾಳ ದಿನ ಎಂದಿದ್ದಾರೆ.

3 thoughts on “ನ್ಯೂಜಿಲ್ಯಾಂಡ್: ಎರಡು ಮಸೀದಿಗಳ ಮೇಲೆ ಗುಂಡಿನ ದಾಳಿ-40 ಮಂದಿ ಬಲಿ

Leave a Reply

Your email address will not be published. Required fields are marked *

error: Content is protected !!