janadhvani

Kannada Online News Paper

ಕೆಸಿಎಫ್ ಕುವೈತ್: ಉಚಿತ ಆರೋಗ್ಯ ತಪಾಸಣಾ ಶಿಬಿರ

ಕುವೈಟ್ ಸಿಟಿ: ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಕುವೈತ್ ರಾಷ್ಟ್ರಿಯ ಸಮಿತಿಯ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವು ದಿನಾಂಕ 08/03/2019 ರಂದು ಬೆಳಿಗ್ಗೆ 7 ರಿಂದ ಮಧ್ಯಾಹ್ನ 1.00 ರ ತನಕ ಪರ್ವಾನಿಯ ಬದರ್ ಅಲ್ ಶಮಾ ಕ್ಲೀನಿಕ್ ನಲ್ಲಿ ಜರಗಿತು.

ಕೆಸಿಎಫ್ ಸದಸ್ಯರು ಸೇರಿದಂತೆ
ಕುವೈತ್ ನಲ್ಲಿರುವ ಹಲವಾರು ಅನಿವಾಸಿಗಳು ಜಾತಿ ಮತ ಬೇದವಿಲ್ಲದೆ ಇದರ ಸದುಪಯೋಗವನ್ನು ಪಡಕೊಂಡರು.

ಶಿಬಿರದಲ್ಲಿ,ಬಹು| ಹುಸೈನ್ ಎರ್ಮಾಡ್, ಬಹು|ಬಾದುಶಾ ಸಖಾಫಿ,ಜನಾಬ್|ಯಾಕುಬ್ ಕಾರ್ಕಳ, ಬಹು|ಉಮರ್ ಝುಹರಿ, ಜನಾಬ್| ಇಬ್ರಾಹಿಂ ವೇಣೂರು, ಜನಾಬ್|ಮೂಸಾ ಇಬ್ರಾಹಿಂ, ಜನಾಬ್|ಅಬ್ಬಾಸ್ ಬಳೆಂಜ ಹಾಗು
ರಾಷ್ಟ್ರೀಯ ಸಮಿತಿಯ ಉಲೆಮಾ, ಉಮರಾ ನಾಯಕರು ಉಪಸ್ಥಿತರಿದ್ದರು.

ಬದರ್ ಅಲ್ ಶಮಾ ಕ್ಲೀನಿಕ್ ನ ಆಡಳಿತ ನಿರ್ದೇಶಕ ಜನಾಬ್|ಅಬ್ದುಲ್ ರಝ್ಝಾಕ್
ಹಾಗು ಬದರ್ ಅಲ್ ಶಮಾ ಮಾರ್ಕೇಟಿಂಗ್ ಮ್ಯಾನೇಜರ್ ನಿತಿನ್ ರವರು ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು.

ಕೊನೆಯಲ್ಲಿ ಕೆಸಿಎಫ್ ರಾಷ್ಟ್ರೀಯ ಸಮಿತಿಯವತಿಯಿಂದ ಆರೋಗ್ಯ ಶಿಬಿರಕ್ಕೆ ಸಹಕರಿಸಿದ ಕ್ಲೀನಿಕ್ ನ ಆಡಳಿತ ವಿಭಾಗ ಹಾಗು ಸಿಬ್ಬಂದಿ ವರ್ಗಕ್ಕೆ ದನ್ಯವಾದ ಗೈದು ಆರೋಗ್ಯ ಶಿಬಿರವು ಮುಕ್ತಾಯ ಗೊಂಡಿತು.

error: Content is protected !! Not allowed copy content from janadhvani.com