ಭಾರತಕ್ಕೆ ಹಾರಾಟ ಆರಂಭಿಸಲಿದೆ ಬಜೆಟ್ ವಿಮಾನ ‘ಸಲಾಮ್ ಏರ್’

ಸಲಾಲಾ: ಭಾರತೀಯ ವಲಯಕ್ಕೆ ಹಾರಲು ತಮ್ಮ ವಿಮಾನಗಳು ಸಿದ್ಧವಾಗಿದೆ ಎಂದು ಒಮಾನ್ ‌ನ ಬಜೆಟ್ ವಿಮಾನ ಕಂಪೆನಿಯಾದ ಸಲಾಂ ಏರ್ ನ ಸಿಇಒ ಕ್ಯಾಪ್ಟನ್ ಮುಹಮ್ಮದ್ ಅಹ್ಮದ್ ಹೇಳಿದ್ದಾರೆ. ದ್ವಿಪಕ್ಷೀಯ ಮಾತುಕತೆಯಂತೆ ಕಾದಿರಿಸಲಾದ ಆಸನಗಳು ಪೂರ್ಣಗೊಂಡ ಕಾರಣ ಸೇವೆಯನ್ನು ಪ್ರಾರಂಭಿಸಲಾಗಲಿಲ್ಲ. ಸೇವೆಯನ್ನು ಆರಂಭಿಸಲು ಆಸನಗಳನ್ನು ಇನ್ನಷ್ಟು ಹೆಚ್ಚಿಸಬೇಕಾಗಿದೆ.

ಸೀಟುಗಳನ್ನು ಹೆಚ್ಚಿಸಲು ಅನುಮತಿಗಾಗಿ ಕಾಯುತ್ತಿದ್ದು ಇದು ಶೀಘ್ರದಲ್ಲೇ ನಡೆಯಲಿದೆ ಎಂದು ನಾವು ಭಾವಿಸುತ್ತೇವೆ ಎಂದು ಮುಹಮ್ಮದ್ ಅಹ್ಮದ್ ಹೇಳಿದ್ದಾರೆ. ಪ್ರಸ್ತುತ, ಸಲಾಮ್ ಏರ್ 17 ನಗರಗಳಿಗೆ ಕಾರ್ಯನಿರ್ವಹಿಸುತಿದ್ದು, ಮುಂದಿನ ಐದು ವರ್ಷಗಳಲ್ಲಿ 20 ವಿಮಾನಗಳನ್ನು ಖರೀದಿಸಲಿದೆ ಮತ್ತು 60 ನಗರಗಳಿಗೆ ಸೇವೆಗಳನ್ನು ಹೆಚ್ಚಿಸಲು ಯೋಚಿಸಿದೆ. ಜಿಸಿಸಿ ದೇಶಗಳಿಗೆ ಸೇವೆಯನ್ನು ಹೆಚ್ಚಿಸುವ ಯೋಜನೆಯೂ ಸಲಾಂ ಏರ್‌ಗೆ ಇದೆ.

ಖರೀಫ್ ಋತುವಿನಲ್ಲಿ, ಇತರ ಜಿ.ಸಿ.ಸಿ ದೇಶಗಳಿಂದ ವಿಮಾನಗಳನ್ನು ಸಲಾಲಾಗೆ ಹೆಚ್ಚಿಸಲಾಗುವುದು. ಸಲಾಮ್ ಏರ್ ಸೇವೆ ಪ್ರಾರಂಭಿಸಿ ಎರಡು ವರ್ಷ ಪೂರ್ಣಗೊಳ್ಳಲಿದ್ದು, ಈ ಅವಧಿಯಲ್ಲಿ ಸಲಾಮ್ ಏರ್ ನ್ನು 1.4 ಮಿಲಿಯನ್ ಪ್ರಯಾಣಿಕರು ಬಳಸಿಕೊಂಡಿದ್ದಾರೆ. ಸಲಾಲಾದಿಂದ ಮಾತ್ರ 6 ಲಕ್ಷ ಪ್ರಯಾಣಿಕರು ಸಲಾಂ ಏರ್‌ನಲ್ಲಿ ಪ್ರಯಾಣಿಸಿದ್ದಾರೆ. ಈ ವರ್ಷ 17 ಹೊಸ ನಗರಗಳಿಗೆ ಸಲಾಂ ಏರ್ ಸೇವೆ ತೆರೆಯಲಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!