ಬಹ್ರೈನ್‌: ಸ್ವದೇಶೀಕರಣ ಇನ್ನಷ್ಟು ವಲಯಗಳಿಗೆ ವಿಸ್ತರಣೆ

ಮನಾಮ: ಬಹ್ರೈನ್‌ನಲ್ಲಿ ಸ್ವದೇಶೀಕರಣವನ್ನು ಇನ್ನಷ್ಟು ವಲಯಗಳಿಗೆ ವಿಸ್ತರಿಸುವ ಪ್ರಯತ್ನಗಳನ್ನು ಬಲಪಡಿಸುವಂತೆ ಸಂಸತ್ತಿನ ಸದಸ್ಯರು ಆಗ್ರಹಿಸಿದ್ದಾರೆ. ಸರಕಾರೀ ವಲಯದಲ್ಲಿ 100 ಶೇ. ಸ್ವದೇಶೀಕರಣವನ್ನು ಜಾರಿಮಾಡಬೇಕೆಂದು ಸಂಸದರು ಒತ್ತಾಯಿಸಿದರು.

ಮುಂದಿನ ಮೂರು ವರ್ಷಗಳಲ್ಲಿ ಸಂಪೂರ್ಣವಾಗಿ ಸ್ವದೇಶೀಕರಣ ಮಾಡುವಂತಹ ಕಡತವನ್ನು ಬಹ್ರೈನ್ ಸಂಸತ್ತಿನಲ್ಲಿನ ಸಂಸದರು ಅನುಮೋದಿಸಿದ್ದಾರೆ. ಪ್ರಸಕ್ತ 85 ರಷ್ಟು ಸಾರ್ವಜನಿಕ ವಲಯದಲ್ಲಿ ಸ್ವದೇಶೀಕರಣವನ್ನು ಜಾರಿಮಾಡಲಾಗಿದ್ದರೂ ಮೂಲನಿವಾಸಿಗಳ ನಿರುದ್ಯೋಗಕ್ಕೆ ಪರಿಹಾರ ಸಾಧ್ಯವಾಗಲಿಲ್ಲ. ನಿರುದ್ಯೋಗ ಪ್ರಮಾಣವನ್ನು ಇನ್ನಷ್ಟು ಕಡಿಮೆಗೊಳಿಸುವ ಸಲುವಾಗಿ ಮತ್ತಷ್ಟು ಸ್ವದೇಶೀಕರಣಕ್ಕೆ ಸಂಸದರು ಒತ್ತಾಯಿಸಿದ್ದಾರೆ.

ಖಾಸಗಿ ವಲಯದಲ್ಲಿ ಸ್ವದೇಶೀಕರಣದ ಪ್ರಯತ್ನವನ್ನು ಇನ್ನಷ್ಟು ಬಲಪಡಿಸಬೇಕೆಂದು ಉದ್ಯೋಗ ಸಮಿತಿಯ ಸದಸ್ಯ ಸಂಸದ ಬಾಸಿಲ್ ಅಲ್ ಮಾಲಿಕಿ ಹೇಳಿದ್ದಾರೆ. ನಿರುದ್ಯೋಗ ಪ್ರಮಾಣ ಹೆಚ್ಚಾಗಿ ಮುಂದುವರೆಯಲು ಅಸಾಧ್ಯವಾದ ಪರಿಸ್ಥಿತಿ ಇದೆ.

ಪ್ರಸ್ತುತ ಬಹ್ರೈನಿಗಳ ನಿರುದ್ಯೋಗ ಪ್ರಮಾಣ ಎಷ್ಟಿದೆ ಎಂದು ತಿಳಿಯಬೇಕು ಮತ್ತು ಪಾರದರ್ಶಕ ರೂಪದಲ್ಲಿ ಪರಿಹಾರಗಳನ್ನು ಕಂಡುಹಿಡಿಯಬೇಕು ಎಂದ ಅವರು, ಸಾಮಾಜಿಕ ಜಾಲತಾಣದಲ್ಲಿ ಕೆಲವು ಪ್ರತ್ಯೇಕ ವಲಯದಲ್ಲಿ ವಿದೇಶೀಯರನ್ನು ತೀರಾ ಅವಗಣಿಸಲಾಗುವುದು ಎನ್ನುವ ಸುದ್ದಿ ಹರಡಲಾಗಿದ್ದು, ಅದು ವಾಸ್ತವ ವಿರುದ್ದವಾಗಿದೆ ಎಂದರು.

Leave a Reply

Your email address will not be published. Required fields are marked *

error: Content is protected !!