ರಿಯಾದ್: ಸೌದಿ ಅರೇಬಿಯಾದ ಮೂಲನಿವಾಸಿಗಳಿಗೆ ಗಂಟೆಯ ವೇತನದ ಪಾರ್ಟೈಮ್ ಕೆಲಸವನ್ನು ಅನುಮತಿಸಲು ಕಾರ್ಮಿಕ ಸಚಿವಾಲಯವು ಕ್ರಮ ಆರಂಭಿಸಿದ್ದು, ಹೊಸ ವ್ಯವಸ್ಥೆಯ ಕರಡು ಸಚಿವಾಲಯದ ವೆಬ್ ಸೈಟ್ ನಲ್ಲಿ ಪ್ರಕಟಗೊಂಡಿದೆ. ಕಾರ್ಮಿಕ ಮಂತ್ರಿಯ ಅನುಮೋದನೆ ಲಭಿಸಿದರೆ ವಿದೇಶಿ ಕೆಲಸಗಾರರು ಕೂಡ ನಿಬಂಧನೆಯನುಸಾರ ಈ ಪ್ರಯೋಜನವನ್ನು ಬಳಸಿಕೊಳ್ಳಬಹುದು.
ಉದ್ಯೋಗದಾತರು ಮತ್ತು ಉದ್ಯೋಗ ತಜ್ಞರು ಮಾರ್ಚ್ 19 ರವರೆಗೆ ಈ ಕುರಿತು ಅಭಿಪ್ರಾಯ ಸಲ್ಲಿಸಲು ಸಚಿವಾಲಯವು ಸಮಯಾವಕಾಶವನ್ನು ನೀಡಿದೆ. ಹೆಚ್ಚಿನ ಸ್ಥಳೀಯ ಜನರನ್ನು ಖಾಸಗಿ ವಲಯಕ್ಕೆ ಆಕರ್ಷಿಸುವುದು ಮತ್ತು ವಿದೇಶಿ ನೌಕರರ ಸಂಖ್ಯೆಯನ್ನು ಕಡಿಮೆಗೊಳಿಸುವುದು ಸಚಿವಾಲಯದ ಉದ್ದೇಶವಾಗಿದೆ.
ಅದೇ ವೆಳೆ, ಈ ಪ್ರಯೋಜನವನ್ನು ಅಪರೂಪದ ಸಂದರ್ಭಗಳಲ್ಲಿ ಕಾರ್ಮಿಕ ಮಂತ್ರಿಯ ಅನುಮೋದನೆಯೊಂದಿಗೆ ವಿದೇಶಿಯರು ಕೂಡ ಮಾಡಬಹುದು. ಗಂಟೆಯ ವೇತನ ವ್ಯವಸ್ಥೆಯಲ್ಲಿ ಕೆಲಸ ಮಾಡುವವರಿಗೆ ವಾರಕ್ಕೆ ವೇತನ ನೀಡಬೇಕು. ಗರಿಷ್ಠ ಕೆಲಸದ ಸಮಯವು ವಾರಕ್ಕೆ 24 ಗಂಟೆಗಳಿರುತ್ತದೆ.
ಉದ್ಯೋಗ ಒಪ್ಪಂದದ ಒಂದು ವರ್ಷದ ಬಳಿಕ, ವ್ಯಕ್ತಿಯು ಹೊಸ ವ್ಯವಸ್ಥೆಗೆ ಬದಲಾಯಿಸಬಹುದು. ನಿತಾಖಾತ್ನಲ್ಲಿ ಇಂತವರಿಗೆ ಅರ್ಧ ಪಾಯಿಂಟ್ ನೀಡಲಾಗುತ್ತದೆ. ಇಂತವರು ತಿಂಗಳಿಗೆ ಕನಿಷ್ಠ 80 ಗಂಟೆಗಳ ಕಾಲ ಕೆಲಸ ಮಾಡಿರಬೇಕು. ಸ್ಥಳೀಯರಿಗೆ ಕೆಲಸದ ಸೌಕರ್ಯವನ್ನು ಸೂಕ್ತಗೊಳಿಸುವುದು ಸಚಿವಾಲಯದ ಉದ್ದೇಶವಾಗಿದೆ.