janadhvani

Kannada Online News Paper

ಕಚೇರಿಗೆ ಬರುವುದು ಮನುಷ್ಯರೆ, ನಾಯಿಗಳಲ್ಲ- ಈಶ್ವರಪ್ಪಗೆ ಸಿದ್ದರಾಮಯ್ಯ ತಿರುಗೇಟು

ಬಾಗಲಕೋಟೆ (ಮಾ.05): ಸಿದ್ದರಾಮಯ್ಯ ಅವರ ಬಾದಾಮಿ ಕಚೇರಿಗೆ ಮನುಷ್ಯರಲ್ಲ, ನಾಯಿ ಕೂಡ ಬರುವುದಿಲ್ಲ ಎಂಬ ಬಿಜೆಪಿ ಶಾಸಕ ಈಶ್ವರಪ್ಪ ಹೇಳಿಕೆಗೆ ತಿರುಗೇಟು ನೀಡಿರುವ ಮಾಜಿ ಸಿಎಂ ಕಚೇರಿಗೆ ಬರುವುದು ನಾಯಿಗಳಲ್ಲ , ಮನುಷ್ಯರು ಎಂದಿದ್ದಾರೆ

ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಕಚೇರಿಗೆ ಯಾಕೆ ನಾಯಿ ಬರುತ್ತವೆ. ಅವನು ಮನುಷ್ಯರನ್ನೇ ನಾಯಿ ಅಂತ ತಿಳಿದುಕೊಂಡಿದ್ದಾನೆಯೇ? ಹಾಗಾದರೆ ಇಲ್ಲಿಗೆ ಬಂದವರು ಯಾರು ಎಂದು ಪ್ರಶ್ನಿಸಿದ್ದಾರೆ.

ಬಾಗಲಕೋಟೆ ಜಿಲ್ಲಾ ಉಸ್ತುವಾರಿ ವಹಿಸಿರುವ ಈಶ್ವರಪ್ಪ ಹೆಗಲಿಗೆ ಅಭ್ಯರ್ಥಿ ಗೆಲ್ಲಿಸುವ ಜವಾಬ್ದಾರಿಯನ್ನು ಬಿಜೆಪಿ ನೀಡಿದೆ. ಬಾದಾಮಿ ಶಾಸಕ ಸಿದ್ದರಾಮಯ್ಯ ಕೂಡ ಕ್ಷೇತ್ರದಲ್ಲಿ ಅಭ್ಯರ್ಥಿ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ಹೊತ್ತಿದ್ದಾರೆ.
ಈ ಹಿಂದೆ ಕೂಡ ಈಶ್ವರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದ ಸಿದ್ದರಾಮಯ್ಯ, ಈಶ್ವರಪ್ಪ ಒಬ್ಬ ಪೆದ್ದ. ಬಾಗಲಕೋಟೆಗೂ ಆತನಿಗೂ ಸಂಬಂಧವೇ ಇಲ್ಲ. ಈ ಜಿಲ್ಲೆಯಲ್ಲಿ ಉಸ್ತುವಾರಿ ಹೇಗೆ ಮಾಡುತ್ತಾರೆ. ಬಾದಾಮಿ, ಬಾಗಲಕೋಟೆ ಮಾತ್ರವಲ್ಲ. ಇಡೀ ರಾಜ್ಯ ನನ್ನದು. ಬಾದಾಮಿ ಜನ ನನ್ನನ್ನು ಪ್ರೀತಿಯಿಂದ ಶಾಸಕನಾಗಿ ಆಯ್ಕೆ ಮಾಡಿದ್ದಾರೆ ಎಂದಿದ್ದರು.

error: Content is protected !! Not allowed copy content from janadhvani.com